ಭಾಗ್ಯದಾತೆ
ನೀ ನನ್ನ ಭಾಗ್ಯದಾತೆ
ನಿನ್ನ ಸನ್ನಿಧಿಯಲಿರಲು
ಮನದಲೇನೋ ಪುಳಕ
ನೀ ತೋರುವ ಆ ಪ್ರೀತಿ
ಹೆತ್ತಬ್ಬೆಯ ಪ್ರೀತಿಯ ನೆನಪಿಸಿ
ಮನವಿಂದು ನಿನ್ನಲ್ಲೇ ಲೀನ
ನನ್ನಮನದಿಚ್ಛೆಯನರಿತು
ಹೊಂದಿಕೊಳ್ಳುವ ಭಾವ
ಎಲ್ಲಿಂದ ನೀ ಪಡೆದೆ ಹೇಳು ಪ್ರಿಯೇ
ನೀನಿರುವ ಮನೆಯೊಂದು
ಪ್ರೀತಿ ತುಂಬಿದ ನಂದನವನ
ಇಲ್ಲ ನನಗಿಲ್ಲಿ ಯಾವ ಚಿಂತೆ
ಚಿಂತೆಗಳು ಸುಳಿಯದಂತೆ
ನೀನಿರಲು ಮನೆ ಮನದಲ್ಲಿ
ಇಂದಿಲ್ಲಿ ನಾನಾದೆ ಒಬ್ಬ ಸಿಪಾಯಿ
ಕೋಟಿ ಕೋಟಿ ಕೊಟ್ಟರೂ
ಸಿಗಲಾರಳಿನ್ನೊಬ್ಬ ನಿನ್ನಂತೆ
ನನ್ನ ಕಣ್ಣಲ್ಲಿ ನೀನೊಬ್ಬಳು ಆದರ್ಶ ಸತಿ
ಬಾಳತೇರನು ಎಳೆಯಲು
ನನ್ನೊಡನೆ ದಿನನಿತ್ಯ ಸಹಕರಿಸಿ
ನನ್ನೆದೆಯ ಭಾರಕ್ಕೆ ನೀ ಜತೆಯಾದೆ ನಲ್ಲೆ
ಪಂಕಜಾ.ಕೆ
Comments
Post a Comment