ಮುರದ್ದಪ್ ಗಜಲ್
ಚುಮು ಚಳಿ ಮೈಯನು ಕೊರೆದಿದೆ ಓ ಇನಿಯಾ
ಬೀಸುವ ತಂಗಾಳಿಯು ಎದೆ ನಡೆಗಿಸುತಿದೆ ಓ ಇನಿಯಾ
ನಿನ್ನ ನೆನವು ತರುತಿದೆ ಮೈ ಮನಕೆ ಪುಳಕ
ಭಾವನೆಗಳಿಂದ ಹೃದಯ ತುಂಬಿದೆ ಓ ಇನಿಯಾ
ನಿನ್ನೊಲುಮೆಯಲಿ ಮೈ ಮರೆಯುವಾಸೆ
ಬಿಸಿಯಪ್ಪುಗೆಯಲಿ ನಾ ಕರಗಿದೆ ಓ ಇನಿಯಾ
ಪ್ರೀತಿಯಿದ್ದರೆ ಬಾಳು ಹಾಲು ಜೇನು ಅಲ್ಲವೇ?
ಒಂದಾಗಿರಲು ಮನಸು ಕುಣಿಯುತಿದೆ ಓ ಇನಿಯಾ
ಮಂಜಿನ ಹನಿಗಳಲಿ ಮಿಯಬೇಕೆಂಬಾಸೆ ಪಂಕಜಾ
ಬಾಳಿನ ತುಂಬಾ ಹೂವು ಹಣ್ಣು ತುಂಬಿದೆ ಓ ಇನಿಯಾ
ಪಂಕಜಾ.ಕೆ.
Comments
Post a Comment