ಮುರದ್ದಪ್ ಗಜಲ್
***********
ನಿನ್ನ ಮಧುರ ನೆನಪಲಿ ಬಂದಿಯಾಗಿರುವೆ ನಲ್ಲ
ನನ್ನ ಒಲವ ಓಲೆಯ ತುಂಬಾ ನೀನಿರುವೆ ನಲ್ಲ
ಹೊಂಗೆ ನೆರಳ ತಂಪಿನಂತೆ ನೆನಪುಗಳು ಕಾಡಿವೆ
ಭಾವದಲೆಗಳು ಹರಿದು ನೀರಾಗಿರುವೆ ನಲ್ಲ
ಬೆಳದಿಂಗಳ ಈ ಇರುಳು ನಮಗಾಗಿದೆಯಲ್ಲವೇ?
ರಾತ್ರಿ ಕರಗಿ ಹಗಲಾದರೂ ನೀ ಬಾರದೇಕಿರುವೆ ನಲ್ಲ
ಮುಂಜಾವಿನ ಮಂಜಿನಲಿ ನೆನೆಯಲು ಮನಕೆ ಆಹ್ಲಾದ
ನೆನಪಿನ ದೋಣಿಯಲಿ ಒಂಟಿಯಾಗಿರುವೆ ನಲ್ಲ
ಹೊಂಗನಸು ಕಾಣುವುದು ತಪ್ಪೇ ಹೇಳು ಪಂಕಜಾ?
ನನಸು ಮಾಡಲು ನಿನಗಾಗಿ ಕಾಯುತಿರುವೆ ನಲ್ಲ
ಪಂಕಜಾ.ಕೆ.
Comments
Post a Comment