ಗೈರ್ ಮುರದ್ದಪ್ ಗಜಲ್
************
ನಿನ್ನ ಅಗಲಿಕೆಯ ಕ್ಷಣವನ್ನು ಸಹಿಸಲಾರೆ
ಮನದಲ್ಲಿ ಬೇಸರವಿದ್ದರೂ ತೋರಿಸಲಾರೆ
ಮನಸಿನ ವೇದನೆ ಕರಗಿ ನೀರಾಗಬೇಕು
ಕಣ್ಣೀರಿನ ಕೋಡಿ ಹರಿದರೂ ನಿನಗೆ ತಿಳಿಸಲಾರೆ
ಹೃದಯದ ಮೂಲೆಯಲಿ ನೆನಪು ಹಸಿರಾಗಿದೆ
ವಿರಹದ ದಿನಗಳನು ನಾ ತಾಳಲಾರೆ
ನೀನೆಂದರೆ ನನಗೆ ಬಹಳ ಇಷ್ಟ ಇನಿಯಾ
ನಿನ್ನೊಡನಾಟವಿಲ್ಲದೆ ಎಂದಿಗೂ ಬಾಳಲಾರೆ
ಪಂಕಜಾ ನೋವುಗಳನು ಬಚ್ಚಿಡಬಾರದು
ಮನದುಮ್ಮಳವನ್ನು ತಿಳಿಸಿ ನೋಯಿಸಲಾರೆ
ಪಂಕಜಾ.ಕೆ.
Comments
Post a Comment