ಮಧುರ ಗಾನ
ಮೆಲ್ಲ ಮೆಲ್ಲನೆ ಲಗ್ಗೆಯಿಟ್ಟಿತು
ಮಂಜಿನ ತೆರೆಯನು ಹನಿಸಿ
ಚುಮು ಚುಮು ಚಳಿಯಲಿ
ತಂಗಾಳಿಯ ತಂಪಿನಲಿ ಚಳಿಗಾಲ
ಮಾಗಿಯ ಚಳಿಗಾಳಿಯು
ಮೈಯನು ಕೊರೆಯುತ
ಹಿತವಾದ ಭಾವವು ತುಂಬಿ
ಕೆರಳಿಸುತ್ತಿದೆ ಮೈ ಮನ
ಸರದಿಯಲಿ ರವಿ ಕಾಯುತಿಹನು
ತೆರೆಯನು ಸರಿಸಿ ಇಣುಕುತ
ನಲ್ಲೆಯ ಮೈಯ ಮೃದು
ಸ್ಪರ್ಶವನು ಬಯಸಿ
ಭಾಸ್ಕರನ ಬಿಸಿ ಸ್ಪರ್ಶಕೆ ನಾಚಿ
ಮಂಜಿನ ಬೆಟ್ಟಗಳು ಕರಗಿ
ನೀರಾಗಿ
ಇಳೆಯು ತನು ಮನವನರಳಿಸಿ ತೊಯ್ದಳು
ಭಾಸ್ಕರನ ಬಿಸಿಯಪ್ಪುಗೆಯಲಿ
ಮನದುಮ್ಮಳವ ಕಳೆದು
ಪ್ರಕೃತಿ ನಗುತ ನಿಂದಳು ಮುದದಲಿ
ಮುತ್ತಿನ ಮಣಿಗಳಂತಿರುವ ಚೆಲು ಹನಿಗಳು
ಸಪ್ತವರ್ಣದ ತೋರಣವ ಕಟ್ಟಿನಲಿಯಿತು
ಭರದಿಂದ ಬಿಗಿದಪ್ಪಿ ಮೈಮನವ ಮರೆಸಿ
ಕರಗಿಸಿದ ಮಂಜಿನ ಹನಿಯ ತೆರೆಯನು
ಬಿಸಿ ಸ್ಪರ್ಶದಿ ಹಿತವಾಗಿ ನರಳಿ
ಕಂಗೊಳಿಸಿತು ಪ್ರಕೃತಿ ಒಲವ ಬಲೆಯಲಿ
ಪಂಕಜಾ.ಕೆ
Comments
Post a Comment