ಭೂಮಿ ಬಾನು
ದೂರದ ಬೆಟ್ಟದ ತಡಿಯಲಿ
ಜುಳು ಜುಳು ಎನ್ನುತ ನದಿಯೊಂದು
ಕಣ್ಮನ ಸೆಳೆಯುತ ಹರಿಯುತ್ತಿದೆ
ಸಾಗರ ಸೇರುವ ಆತುರ ಕಾತುರ
ತನ್ನೊಡಲಲ್ಲಿ ವಿಸ್ಮಯ ತುಂಬಿ
ಎಲ್ಲಿಯೂ ನಿಲ್ಲದೆ ಓಡುತಿದೆ
ಪಡುಗಡಲಲಿ ಮರೆಯಾಗುವ ರವಿ
ಬಾನಲಿ ಬಣ್ಣದ ಓಕುಳಿ ಸವಿ
ಸಂಗಮವಾಯಿತೆ ಭೂಮಿ .ಬಾನು?
ಮುಳುಗುವ ರವಿ ಕಿರಣದ ಬಿಂಬ
ರಂಗಿನ ಓಕುಳಿ ಬಾನಲಿ ಚೆಲ್ಲಿ
ರಸಿಕರ ಎದೆಯಲಿ ತಲ್ಲಣ ತುಂಬಿಸಿತು
ಮೈ ಮರೆಯುವ ಮೋಹಕ ನೋಟ
ಕಡಲ ತಡಿಯಲಿ ಮುಳುಗುವ ನೋಟ
ಭೂಮಿ ಬಾನಿನ ಸಂಗಮ ದೃಶ್ಯ
ಪಂಕಜಾ.ಕೆ
Comments
Post a Comment