ಗಜಲ್
ಜುಳು ಜುಳು ಹರಿಯುವ ನದಿಯಂತೆ ಮನಸು ಪ್ರಶಾಂತವಾಗಿದೆ ನಲ್ಲ
ಮುಂಜಾವಿನ ತಂಗಾಳಿಯ ತಂಪಿನಲಿ ನಲಿಯಬೇಕೆನಿಸಿದೆ ನಲ್ಲ
ನಿನ್ನ ಒಡನಾಟವಿದ್ದರೆ ಬಾಳ ಬಳ್ಳಿಯಲ್ಲಿ ಹೂವು ಅರಳುವುದು
ನಗು ನಗುತ ಜೀವನದ ಸವಿಜೇನು ಸವಿಯೋಣವೆನಿಸಿದೆ ನಲ್ಲ
ನಾವಿಬ್ಬರು ಒಂದಾಗಿ ಕಡಲ ತಡಿಯಗುಂಟ ಸಾಗಬೇಕು
ಸಾಗರದ ಆಳದಂತಿರುವ ನಿನ್ನ ಮನವನ್ನು ತಿಳಿಯಬೇಕಾಗಿದೆ ನಲ್ಲ
ಬಾಳೊಂದು ನಂದನವನ ಆಗಿದೆಯಲ್ಲವೇ
ನೀಜತೆಯಲ್ಲಿದ್ದಾಗ ಯುಗವೊಂದು ಕ್ಷಣದಂತಾಗಿದೆ ನಲ್ಲ
ಕಷ್ಟ ಸುಖಗಳನ್ನು ಸಮಾನವಾಗಿ ಕಾಣಬೇಕಲ್ಲವೇ ಪಂಕಜಾ
ತುಂಬು ಪ್ರೀತಿಯಿಂದ ಜೀವನದಲ್ಲಿ ಅರುಣೋದಯವಾಗಿದೆ ನಲ್ಲ
ಪಂಕಜಾ.ಕೆ
Comments
Post a Comment