ತಲೆನೋವು (ಹಾಸ್ಯಕವನ)
ಬಂದಿತು ಇಂದು ತಲೆನೋವು
ಹಚ್ಚಿದೆ ಹಣೆಗೆ ಜಂಡು ಬಾಮ್
ಉರಿಯಲಿ ತುಂಬಿತು ಕಣ್ಣೀರು
ಬಳ ಬಳ ಸುರಿಯಿತು ಕಣ್ಣಿಲಿ ನೀರು
ಹೊರೆಟೆನು ಡಾಕ್ಟರ್ ಭೇಟಿಗೆನಾನು
ಕಾಣದೆ ಕಲ್ಲೆಡವಿ ಜಾರಿ ಬಿದ್ದು ಬಿಟ್ಟೆ
ಸದ್ದಿಗೆ ಓಡುತ ಬಂದರು ನನ್ನವರು
ಎತ್ತಲು ಕೈಯನ್ನು ಮುಂದೆ ಚಾಚಿದರು
ಗಜಲಕ್ಷ್ಮಿಯ ಶರೀರದ ನನ್ನನ್ನು
ಎತ್ತಲು ಆಗದೆ ಬಿದ್ದರು ಮೈಮೇಲೆ
ಸಣ್ಣನೆ ನಗುವದು ಮಿಂಚಿತು ಮುಖದಲ್ಲಿ
ಜೋರಿನ ನಗೆ ಹೊರಟಿತು ಇಬ್ವರ ಮುಖದಲ್ಲಿ
ನಕ್ಕು ನಕ್ಕು ಸುಸ್ತಾಯಿತು
ತಲೆನೋವು ಎಲ್ಲೋ ಓಡಿಹೋಯ್ತು
ಪ್ರತಿಯೊಂದು ನೋವಿಗೆ ನಗುವೆ ಔಷದವು
ತಿಳಿಯಿತು ಇದು ನನಗಿಂದು
ನಗಿಸಿರಿ ನಗಿರಿ ನಿತ್ಯ ಮನಸ್ಪೂರ್ತಿ
ರೋಗಗಳು ಬಾರದಂತೆ ದೂರ ಅಟ್ಟಿ
ನಗುವೆ ಜೀವನದ ಮಂತ್ರವಾಗಲಿ
ನಗುತ ನಗಿಸುತ ನಾವು ಬಾಳೋಣ
ಪಂಕಜಾ.ಕೆ
Comments
Post a Comment