ಚಂದಿರ (ಶಿಶು ಗೀತೆ)
ಆಗಸದಲ್ಲಿ ನಿತ್ಯವೂ ಓಡುವೆ
ನೀನು ಎಲ್ಲಿಗೆ ನಿನ್ನಯ ಪಯಣ?
ಬೆಳ್ಳನೆ ಬೆಳಕನು ಧರೆಯಲಿ ಹರಡಿ
ತಂಪನು ತುಂಬುವಿಯಲ್ಲ
ತಿಂಗಳ ಬೆಳಕಲಿ ಆಡುತಲಿದ್ದರೆ
ಮನದಲಿ ಏನೋ ಉಲ್ಲಾಸ
ತಣ್ಣನೆ ಸ್ಪರ್ಶವು ಹಿತವನು ಕೊಡುವುದು
ಮನದಲಿ ತಂಗಾಳಿಯ ಆಹ್ಲಾದ
ದೋಸೆಯ ತೆರದಲಿ ಬಾನಲಿ ಮಿನುಗಿ
ಕಣ್ಮನ ಸೆಳೆಯುವೆಯಲ್ಲ
ಹುಣ್ಣಿಮೆ ದಿನದಲ್ಲಿ ಅಂಬರದಲ್ಲಿ
ನಿನ್ನನು ನೋಡಲು ನನಗಾನಂದ
ದಿನ ದಿನ ಕರಗುತ ಹೋಗುವೆಯೆಲ್ಲಿಗೆ
ನೀನಿಲ್ಲದ ದಿನ ಧರೆಯಲಿ ಕಾರಿರುಳು
ಪಂಕಜಾ ಕೆ
Comments
Post a Comment