ಕನ್ನಡ ಸವಿ
ಮೂಡಣದಲ್ಲಿ ಮೂಡಲು ರವಿ
ಕನ್ನಡನಾಡಲಿ ತುಂಬಿತು ಹಬ್ಬದ ಸವಿ
ಕನ್ನಡ ಭಾಷೆಯ ಹರಡಿಸುತ
ಕನ್ನಡ ಡಿಂಡಿಮ ಭಾರಿಸುತ
ಬಂದಿತು ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ
ಹಾಡುವ ಕೋಗಿಲೆಯ ಇಂಚರದಂತೆ
ಎಲ್ಲೆಡೆ ತುಂಬಿತು ಕನ್ನಡ ಭಾಷೆಯ ಇಂಪು
ಅರಳಿದ ಮಲ್ಲಿಗೆ ಹೂವಿನ ಪರಿಮಳದಂತೆ
ಸುತ್ತಲೂ ಹಬ್ಬಿತು ಕನ್ನಡ ಕಂಪು
ಕನ್ನಡ ತಾಯಿಯ ಮಕ್ಕಳೇ ಕೇಳಿರಿ
ಕನ್ನಡ ಭಾಷೆಯ ಮರೆಯದಿರಿ
ಚಂದದ ನುಡಿಯದು ಕನ್ನಡ
ತಾಯಿಯ ಮಮತೆಯ ನೆನಪಿಸುವುದು
ಹಚ್ಚುವ ನಾವು ಕನ್ನಡ ದೀಪ
ಬೆಳಗುವ ಜಗತ್ತಿನೆಲ್ಲೆಡೆ ಕನ್ನಡ ನುಡಿದೀಪ
ಹಾರಲಿ ಎತ್ತರಕ್ಕೇರಲಿ ಕನ್ನಡ ಬಾವುಟ
ಹರಡಲಿ ಎಲ್ಲೆಡೆ ಕನ್ನಡ ಕಂಪು ಪಟ ಪಟ
ಪಂಕಜಾ.ಕೆ.
Comments
Post a Comment