ದತ್ತ ಪದದ ಗಜಲ್
ನನ್ನ ಮುಖದಲಿ ನಗುವ ಚಿಲುಮೆ ನಿನಗಾಗಿ
ಕಣ್ಣಿನಲ್ಲಿ ಸೂಸುವ ಒಲುಮೆ ನಿನಗಾಗಿ
ನನ್ನ ಪ್ರೀತಿಯ ಆಳ ಹೇಗೆ ತಿಳಿಸಲಿ ಹೇಳು?
ನಾಡಿ ಮಿಡಿತವೂ ಒಲವ ಸೂಸುತಿದೆ ಮತ್ತೊಮ್ಮೆ ನಿನಗಾಗಿ
ನಗು ನಗುತ್ತಾ ಇದ್ದರೆ ಬಾಳು ಸುಂದರ ,ಅಲ್ಲವೇ?
ಹಿತವಾಗಿ ನಗಬಾರದೆ ನೀನೊಮ್ಮೆ ನಿನಗಾಗಿ
ನೀನಿಲ್ಲದೆ ಮನೆ ಮನಸು ಶೂನ್ಯವಾಗಿದೆ
ಬಾಡಿದ ನನ್ನ ಮುಖವನ್ನು ನೋಡಬಾರದೆ ಈಗೊಮ್ಮೆ ನನಗಾಗಿ
ಬಾಳ ತೇರನು ಏರಿ ಜತೆಯಾಗಿ ಸಾಗೋಣ ವೆಂದಿದ್ದೆಯಲ್ಲಪಂಕಜಾ
ನನ್ನೊಡನಾಟವೂ ಬೇಡವೇ ಇನ್ನೊಮ್ಮೆ ನಿನಗಾಗಿ
ಪಂಕಜಾ ಕೆ
Comments
Post a Comment