ಕಾವ್ಯಾಂತರಂಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಗಜಲ್
ಗಜಲ್
ಮುನಿಸೇತಕೆ ಮುದದಿ ಮಲ್ಲಿಗೆ ಮುಡಿಸಿರಲು ಸಖಿ
ಕನಸೇತಕೆ ಮನದಿ ನೆಮ್ಮದಿ ಇರದಿರಲು ಸಖಿ
ಬಾನಂಚಿನಲಿ ರವಿ ಹೊಳೆಯುತಿರುವನಲ್ಲವೇ?
ಕಾತರಿಸಿದೆ ಕಣ್ಣುಗಳು ನಿನ್ನ ನಗುಮುಖವ ನೋಡಲು ಸಖಿ
ಒಲಿಸಿಕೊಳ್ಳಲು ಬರಲೆಂದು ಕಾದಿರುವೆಯಾ ಹೇಳು?
ಕಾಲುಗಳು ಮುಷ್ಕರ ಹೂಡಿವೆ ನೀನು ನಗದಿರಲು ಸಖಿ
ನೀಲಾಗಾಸದಲಿ ಚಂದಿರ ತಾರೆಗಳನೊಡನಾಡುತಿರುವನಲ್ಲವೇ?
ಮನಸು ಬಯಸಿದೆ ನಿನ್ನೊಡನೆ ವಿಹರಿಸಲು ಸಖಿ
ಬಾನಲಿ ಕರಿ ಮೋಡಗಳು ಕಣ್ಣು ಮುಚ್ಚಾಲೆ ಯಾಡುತಿವೆಯೇಕೆ?
ನಮ್ಮಿಬ್ಬರ ಒಡನಾಟ ಸರಾಗವಾಗಿರಲು ಸಖಿ
ತಂಗಾಳಿಯು ಹಿತವಾಗಿ. ಬೀಸುತಿದೆಯಲ್ಲವೇ?
ಮನವು ಆಶಿಸುತ್ತಿದೆ ಬೆಳದಿಂಗಳೂಟದ ಸವಿ ಸವಿಯಲು ಸಖಿ
ನೈದಿಲೆಗಳು ಕೊಳದಲ್ಲಿ ಅರಳಿದೆಯಲ್ಲವೇ ಪಂಕಜಾ?
ನಮ್ಮೊಡನಾಟವ ಕಂಡು ನಲಿಯಲು ಸಖಿ
ಪಂಕಜಾ.ಕೆ.
Comments
Post a Comment