ರೈತ (ಶಿಶುಗೀತೆ)
ಕೋಳಿ ಕೂಗುವ ಮುನ್ನ
ನೇಗಿಲನು ಹೊತ್ತು
ನಡೆಯುವನು ಗದ್ದೆಯೆಡೆ ನಮ್ಮ ರೈತ
ಗದ್ದೆಯನ್ನು ಉಳುತ
ಓ ಬೇಲೆ ಹಾಡುತ
ದುಡಿಯುವನು ಮಣ್ಣಿನಲ್ಲಿ ನಮ್ಮ ರೈತ
ಬೀಜವನ್ನು ಹೊಲದಲ್ಲಿ ಬಿತ್ತಿ
ಮೊಳಕೆಬರಲೆಂದು ಸುಡುಮಣ್ಣು ಎರಚಿ
ಹಕ್ಕಿಗಳ ಪಾಲಗದಂತೆ ಕಾಯುವನು ರೈತ
ಬೆಳೆ ಬೆಳೆದು ಹೊನ್ನ ತೆನೆಯಾಗಿ
ಕಾಳು ತುಂಬಿದ ಗದ್ದೆಯನು ಕಂಡು
ಮೈಮರೆತು ಭೂತಾಯಿ ಒಡಲಿಗೆ ನಮಿಸುವೆನು ನಮ್ಮ ರೈತ
ಅನ್ನವನ್ನು ಬೆಳೆಯುತ್ತ
ಉಣಿಸುವನು ನಮಗೆಲ್ಲ
ದೇಶದಾ ಬೆನ್ನೆಲುಬು ನಮ್ಮ ರೈತ
ಈತನೇ ನಮ್ಮ ಜೀವನದ ಆದರ್ಶ
ದುಡಿಮೆಯೇ ದೇವರೆಂದು ತಿಳಿದಾತ
ದುಡಿಮೆಯಲಿ ತೃಪ್ತಿ ಪಡುವಾತ
ವಂದಿಸುವೆ ನಿನಗೆ ಓ ಅನ್ನದಾತ
ಪಂಕಜಾ.ಕೆ
Comments
Post a Comment