ದಾರಿ
ಹಸಿರು ವನರಾಶಿಯ ಮದ್ಯೆ ಮಲಗಿರುವ ರಸ್ತೆ
ಅಂಕುಡೊಂಕಾಗಿ ಇದ್ದರೂ ಸೇರಬಹುದು ಗುರಿ
ಎರಡು ಬದಿಯಲ್ಲೂ ತುಂಬಿರುವ ವನರಾಶಿ
ಗುರಿಯ ಸೇರುವ ಪಯಣಕ್ಕೆ ಅದೊಂದು ದಾರಿ
ಹಸಿರು ತುಂಬಿದ ಮಲೆನಾಡ ಸೊಬಗು
ಭೂರಮೆಯು ಹೊದ್ದಿರುವಳು ಹಸಿರ ಸೆರಗು
ಉಳಿಸಬೇಕು ಮಲೆನಾಡ ಹಸಿರ ಸೆರಗು
ಗಿಡ ಮರಗಳ ನೆಟ್ಟು ಬೆಳೆಸಿದರೆ ತುಂಬುವುದು ಉಸಿರು
ಹಸಿರ ಮಧ್ಯದಲ್ಲಿ ಸಂಚರಿಸುವ ಆನುಭವ
ತಾಯಿಯಪ್ಪುಗೆಯಂತೆ ಮುದಕೊಡುವ ಬಾವ
ಬೀಸುವ ಗಾಳಿಯಲ್ಲಿ ನವಿರು ಗಂಧ
ಉಸಿರಿಗೆ ಬೇಕು ನಮಗೆ ಹಸಿರಿನ ಬಂಧ
ತಂಬೆಲರಲ ತಂಪಿನಲಿ ಏನು ಆಹ್ಲಾದ
ಪ್ರಕೃತಿಯಿತ್ತ ಕೊಡುಗೆ ಇದು ಈ ಸ್ವಾದ
ಪಂಕಜಾ.ಕೆ
Comments
Post a Comment