ಬೆಳಗಿನ ಬೆರಗು
ಮೂಡಣ ದಿ ರವಿ ಮೂಡಿದಾಗ
ಪ್ರಕೃತಿ ಮಾತೆಯ ನಲಿವಿನ ಬೆರಗು
ಮನದಿ ಮೂಡುವ ಭಾವನೆಗಳ ಸಂತೆಯಲಿ
ಹೊಸದೊಂದು ಕಾವ್ಯದ ಗುನುಗು
ಜೀವನದಿ ಉಕ್ಕೇರಿ ಕುಣಿದಾಗ ಸಂತಸದ ಹೊನಲು
ನೆಳಲು ಬೆಳಕಿನಾಟದಲಿ ಜಗಕೊಂದು ಸೆರಗು
ಹೂವ ತೇರನು ಕಂಡು ಮನದಲ್ಲಿ ನಲಿವು
ರಾಗ ಅನುರಾಗದಲಿ ತೇಲಿ ಮುಳುಗುತಿರಲು ಮನವೊಂದು ಕಡಲು
ಬಾಳೊಂದು ಚೆಲುತೋಟವಾಗಿದೆ
ತುಂಬಿದೆ ಅದರಲ್ಲಿ ಸವಿಜೇನ ಹೊನಲು
ಪಂಕಜಾ.ಕೆ.
Comments
Post a Comment