ಗಜಲ್
ನಿನ್ನ ಸಂಗಡವಿರಲು ಮನಸು ನವಿಲಿನಂತೆ ಕುಣಿಯುತಿದೆ ಸಖಿ
ಹೂವ ಕಂಡ ದುಂಬಿಯಂತೆ ಚೆಲ್ಲಾಟವಾಡಬಯಸಿದೆ ಸಖಿ
ನೀನೊಂದು ಉತ್ಸ್ಸಾಹದ ಚಿಲುಮೆಯಂತಿರುವೆಯಲ್ಲ
ಮನವು ನಿನ್ನೊಡನಾಟದ ಗುಂಗಿನಲ್ಲಿದೆ ಸಖಿ
ನಗುಮುಖದ ಸೌಂದರ್ಯಕ್ಕೆ ಸೋತು ಹೋಗಿರುವೆ ನಾನು
ನನ್ನೊಡಲಿಗೆ ಒಲವ ಸಿಂಚನವ ಉಣಬಡಿಸಿದೆ ಸಖಿ
ನಿನ್ನೊಡನಾಟವಿರಲು ಬಾಳು ಸವಿ ಜೇನ ಹೊನಲು
ನಿತ್ಯವೂ ನಿನ್ನಧರಗಳ ಸವಿ ಸವಿಯಬೇಕೆನಿಸಿದೆ ಸಖಿ
ಪ್ರಕೃತಿಯಲ್ಲಿ ನಲಿಯುವುದು ಮನಕೆ ಮುದ ಕೊಡುತಿದೆ
ಸಮಯದ ಪರಿವೆಯಿಲ್ಲದೆ ವಿಹರಿಸಬೇಕೆನಿಸಿದೆ ಸಖಿ
ಬಾಳೊಂದು ನಂದನವನವಾಗಿದೆಯಲ್ಲವೇ ಪಂಕಜಾ?
ನಿನ್ನಿಂದ ನನ್ನ ಜೀವನವು ಸುಖದ ಸುಪ್ಪತ್ತಿಗೆಯಾಗಿದೆ ಸಖಿ
ಪಂಕಜಾ.ಕೆ
Comments
Post a Comment