ಸ್ವರ್ಗ ಸದೃಶ ಜೀವನ
ಎಲ್ಲೆಲ್ಲೂ ತುಂಬಿದೆ ಹಸಿರು ವನರಾಶಿ
ಹೂ ಹಣ್ಣುಗಳಿಂದ ತುಂಬಿದ ಪ್ರಕೃತಿಯ ಒಡಲು
ಬೀಸಿ ಬರುತಿರುವ ಮಂದಮಾರುತ
ಹೂಗಳ ನವಿರು ಕಂಪಿನ ಲಾಸ್ಯ
ಜುಳು ಜುಳು ಹರಿಯುವ ನದಿ
ತುಂಬಿ ತುಳುಕುವ ಕೆರೆ ಕಟ್ಟೆಗಳು
ಪ್ರೀತಿವಿಶ್ವಾಸದಿ ನಲಿಯುವ ಬದುಕು
ನಂಬಿಕೆಯ ನೆಲೆಯಾದ ತಾಣ
ಬವಣೆಯಿಲ್ಲದ ಚೆಲು ಬದುಕು
ಅಂತಲ್ಲಿ ಬದುಕಿ ಬಾಳುವುದೇ ಪಾವನ
ಬೆಳದಿಂಗಳ ತಂಪು ತುಂಬಿದ ತಂಗಾಳಿ
ಮನಕೆ ಮುದ ಕೊಡುವ ಹಕ್ಕಿಗಳುಲಿ
ಅರಳಿರುವ ಹೂವುಗಳ ನವಿರುಗಂಧ
ಕೋಗಿಲೆಯ ಉಲಿತದ ಮಂಜುಳ ನಾದ
ಮಕರಂಧವನು ಹೀರುವ ದುಂಬಿಗಳ ದಂಡು
ಮನಕೆ ಮುದತರುವ ನೋಟ
ಬದುಕುಪಾವನವಾಗಲು ಇನ್ನೇನು ಬೇಕು
ಉಳಿಸಬೇಕು ನಾವು ಈ ಪ್ರಕೃತಿ ಸಂಪತ್ತು
ಪಂಕಜಾ ಕೆ.
Comments
Post a Comment