ದತ್ತ ಪದದ ಗಜಲ್
ಕಂಗಳ ಕಾಂತಿಯಲಿ ತುಂಬಿದೆ ಒಲುಮೆ ನಿನಗಾಗಿ
ಪ್ರೀತಿಯಲಿ ಎಂದೆಂದೂ ಇರದು ಕಡಿಮೆ ನಿನಗಾಗಿ
ಜತೆಯಿರಲು ನವೋಲ್ಲಾಸದಿ ನಲಿಯಬೇಕು
ಮನಸು ಸಂತಸದಲ್ಲಿದ್ದರೆ ಗರಿಮೆ ನಿನಗಾಗಿ
ನಿನ್ನೊಡನಾಟವು ಮನಕೆ ತುಂಬುತಿದೆ ಉಲ್ಲಾಸ
ನಾನಿಂದು ಉತ್ಸ್ಸಾಹದ ಚಿಲುಮೆ ನಿನಗಾಗಿ
ಬಾಳ ದೋಣಿಯಲಿ ಕಷ್ಟಗಳು ತುಂಬಿದೆ ನೋಡು
ನಗು ನಗುತ್ತಾ ಇದ್ದರೆ ಅದೇ ಹಿರಿಮೆ ನಿನಗಾಗಿ
ನೀ ಜತೆಯಲ್ಲಿದ್ದರೆ ಬಾಳು ಸೊಗಸು ಪಂಕಜಾ
ಮನಸು ಆಗಿದೆ ಕುದಿಯುವ ಕುಲುಮೆ ನಿನಗಾಗಿ
ಪಂಕಜಾ.ಕೆ.
Comments
Post a Comment