ಗಜಲ್ ( ಕಡಲು ವಿಷಯದ ಬಗ್ಗೆ)
ಅಂತರಾಳದಲಿ ಭಾವನೆಗಳು ಬೋರ್ಗರೆಯುತಿದೆ ಗೆಳತಿ
ಮುಖವು ಕಡಲಾಳದ ನೀರಿನ ತೆರದಿ ಶಾಂತವಾಗಿದೆ ಗೆಳತಿ.
ನೆನಪುಗಳ ಭಾರದಿಂದ ಜರ್ಝರಿತವಾಗಿದೆ ಮನ
ಚಿಂತೆಗಳು ಮನಸಿನಾಳವ ಕೆದಕಿ ರಾಡಿಗೊಳಿಸಿದೆ ಗೆಳತಿ
ಸಾಗರದ ಅಲೆಯಂತೆ ಜೀವನದ ತೊರೆಗಳು ಏರಿಳಿಯುತಿದೆ
ಒಡಲಲ್ಲಿ ತುಂಬಿರುವ ನೋವನು ಹಂಚಬೇಕೆನಿಸಿದೆ ಗೆಳತಿ
ಕ್ರೂರ ಮೃಗಗಳಂತಿರುವ ಮನುಜರ ಕಂಡು ನೆತ್ತರು ಕುದಿಯುತಿದೆ
ಹೆಣ್ಣಿನ ಮೇಲೆ ಏಕಿಷ್ಟು ದೌರ್ಜನ್ಯ ವಾಗುತಿದೆ ಗೆಳತಿ
ಹೆಣ್ಣಿಲ್ಲದ ಜೀವನ ಪರಿಪೂರ್ಣವಾಗಲಾರದು ಅಲ್ಲವೇ
ಕಣ್ಣಿದ್ದೂ ಕುರುಡರಾಗಿರುವ ಕಾಮಾಂಧರಿಗೆ ಶಿಕ್ಷೆಯಾಗಬೇಕಾಗಿದೆ ಗೆಳತಿ
ನಿತ್ಯವೂ ಕಾಮಾಂಧರ ಆರ್ಭಟವ ನೋಡಿ ಕಲ್ಲಾಗಿದೆ ಮನಸು
ಸಮಜಘಾತುಕರ ಸಂತತಿಯನ್ನೇ ಹೊಸಕಿ ಹಾಕಬೇಕಿದೆ ಗೆಳತಿ
ಗಂಡು ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಬೇಕು ಪಂಕಜಾ
ಒಡಹುಟ್ಟಿದವರಂತೆ ಅವರನ್ನು ರಕ್ಷಿಸಬೇಕಾಗಿದೆ ಗೆಳತಿ
ಪಂಕಜಾ.ಕೆ
Comments
Post a Comment