ಸುಪ್ರಭಾತ (ಹವಿ ಕನ್ನಡದ ಕವನ)
ಆಕಾಶದ ಮೂಡು ಹೊಡೆಲಿ
ಮಂಜಿನ ಹನಿಯ ನೂಕಿ
ಸೂರ್ಯ ಚಾಮಿ ಬಂದ
ಕೆಂಪು ಬಣ್ಣದ ಚೆಂಡಿನ ಹಾಂಗೆ
ಉದಿಯಾತು ಹೇಳಿ ಅವ
ಸುಪ್ರಭಾತವ ಹಾಡಿದ
ಆಕಾಶದ ತುಂಬಾ ಬಣ್ಣ
ನೋಡುಲೆ ಸಾಲ ಎರಡು ಕಣ್ಣ
ಹಕ್ಕಿಗ ಎಲ್ಲಾ ಜಂಬಾರಕ್ಕೆ ಹೆರಟ ವು
ಮದುವೆದಿಬ್ಬಣ ಹೋಪ ಹಾಂಗೆ
ತಂಪುಗಾಳಿ ಲಾಯಿಕಕ್ಕೆ ಬೀಸುತ್ತು
ಕೋಗಿಲೆಚಂದಕ್ಕೆಪದ್ಯಹೇಳುತ್ತಾ ಇದ್ದು
ಉದಿಯಪ್ಪಗ ಗಾಳಿಗೆರಜಾ ನಡೆಯಕ್ಕೂ
ಸೂರ್ಯ ಚಾಮಿಯ ಎಳೆ ಬೆಸಿಲು
ಮೈ ಕೈಗೆ ನಿತ್ಯ ಬೀಳೆಕ್ಕೂ
ಆರೋಗ್ಯಕ್ಕೆ ಇದು ತುಂಬಾ ಒಳ್ಳೇದು
ಉದಿಯಪ್ಪಗಣ ಸಮಯಲ್ಲಿ
ಸಣ್ಣ ನಡಿಗೆ ದಿನಾ ಮಾಡೆಕ್ಕು
ಆರೋಗ್ಯ ಜೀವನ ಇದರಂದ ಸಿಕ್ಕುಗು
ಹಾಂಗಾಗಿ ನಾವೆಲ್ಲನಿತ್ಯರಜಾ ನಡೆಯಕ್ಕು
ಪಂಕಜಾ.ಕೆ
Comments
Post a Comment