ಹಾಸ್ಯ ಹನಿ ಕವನ
1 .... ಏಟು
ಚೆಲುವ ನಿನ್ನ ನೋಡಿದಂದು
ಮನದಿ ಹರ್ಷ ಮೂಡಿತು
ಕೆನ್ನೆ ತುಂಬಾ ಕೆಂಪು ತುಂಬಿ
ಸೇಬಿನಂತೆ ಆಯಿತು
ಇಂದು ನೀನು ಜಗಳವಾಡಿ
ನನ್ನ ಮನವು ನೊಂದಿತು
ನೀನು ಕೊಟ್ಟ ಏಟಿಗಿಂದು
ಕೆನ್ನೆ ತುಂಬಾ ಕೆಂಪು ತುಂಬಿ
ಚೀನಿಕಾಯಿಯಂತೆ ಆಯಿತು
ಪಂಕಜಾ.ಕೆ.
2..ಉನ್ಮತ್ತ
ನಿನ್ನ ತುಟಿಯಲಿ ಸುರಿಯುತಿತ್ತು
ಮಧುರಸದ ಜೇನು
ಅದರ ಸವಿಯ
ಸವಿಯಲೆಂದು
ನಾನಾದೆ ಹೆಜ್ಜೇನು
ಮಧುಪಾನದ ಆಮಲಲಿ ಅಂದು ನಾನು ಉನ್ಮತ್ತ
ಇಂದೀಗ ನಾನಾದೆ ಒಬ್ಬ ಪಾನಮತ್ತ
ಪಂಕಜಾ. ಕೆ.
Comments
Post a Comment