Skip to main content

ಜನವರಿ 2020 ಸ್ನೇಹ ಸಂಗಮ ಬಳಗದಲ್ಲಿ ಉತ್ತಮ ವೆಂದು ಆಯ್ಕೆಯಾದ ಕವನ

ಜನವರಿ  2020 

ಬಂದಿತು ಇಪ್ಪತ್ತು ಇಪ್ಪತ್ತು ವರ್ಷ
ಪ್ರಕೃತಿಯಲೇನಿದೆ ಹೊಸತನದ  ಹರ್ಷ
ಮೂಡಣದಲಿ ಮೂಡಿದ ರವಿ
ಎಂದಿನಂತೆ ಜಗಕೆ ಪಸರಿಸಿದ ಬೆಳಕಿನ ಸವಿ

ಪ್ರಕೃತಿಯಲಿ ಎಲ್ಲಿದೆ ಬದಲಾವಣೆ
ಗೋಡೆಯ ಕ್ಯಾಲೆಂಡರ್ ಮೂಲೆ ಸೇರಿದ್ದೊಂದೇ ಬದಲಾವಣೆ 
ಪ್ರಕೃತಿ  ಮಾತೆ ಚಿಗುರಿ ನಲಿಯುವ ದಿನ
ನವ  ವಸಂತನಾಗಮನದ ದಿನ

ಆಚರಿಸಬೇಕು ಸಂಭ್ರಮದಿಂದ ಹೊಸವರ್ಷವನು ಆ ದಿನ
ಬೇವು ಬೆಲ್ಲಗಳ ಹಂಚಿ  ಎಲ್ಲರೊಡನಾಡಿ ನಲಿವ ದಿನ
ಕುಡಿತ ಕುಣಿತದಲ್ಲಿ ಪರಿಸರ ಹಾಳು
ಡಿಸೆಂಬರ್ 31 ರ ಮಧ್ಯರಾತ್ರಿಯ ಗೋಳು

ಹೊಸ ವರ್ಷವೆಂದು ಆಚರಿಸುವರು ಆ ಕ್ಷಣವ
ಪ್ರಕೃತಿಯ ಬದಲಾವಣೆಗೆ ಕಾಯಬೇಡವೆ ಮಾನವ
ಯುಗಾದಿಯ ಆ ಶುಭದಿನ ಪ್ರಕೃತಿಯ ಜತೆ ನಲಿಯೋಣ
ಹೊಸವರ್ಷ ದ ಸಂಭ್ರಮವನ್ನು ಪ್ರಕೃತಿಯ ಜತೆ ಆಚರಿಸೋಣ

ಪಂಕಜಾ.ಕೆ.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...