Skip to main content

5 ನ್ಯಾನೊ ಕಥೆಗಳು

[10/01, 2:50 PM] pankajarambhat: ಸ್ವಾತಂತ್ರ್ಯ (ನ್ಯಾನೊ ಕಥೆ)

ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯಬೇಕು .
ಅವರಿಗೆ ಬೇಕಾದಂತೆ ಇರಲು  ಅವರಿಗೂ ಹಕ್ಕಿದೆ. ಎಂದು ಉದ್ದುದ್ದ ಭಾಷಣ ಬಿಗಿಯುತ್ತಾ ಚಪ್ಪಾಳೆ ಗಿಟ್ಟಿಸುತ್ತಿದ್ದ ಆತ ಮನೆಯಲ್ಲಿ ತನ್ನ ಹೆಂಡತಿ ಮಗಳಿಗೆ ನೂರಾರು ಕಟ್ಟುಪಾಡುಗಳನ್ನು ಹಾಕಿದ್ದ

ಪಂಕಜಾ .ಕೆ
[10/01, 2:53 PM] pankajarambhat: ವಧು (ವರ) ಪರೀಕ್ಷೆ (ನ್ಯಾನೊ ಕಥೆ)

ವಧು ಪರೀಕ್ಷೆ ಮಾಡಿ ನೋಡಿದ ಹುಡುಗಿಯರಲ್ಲೆಲ್ಲಾ ಏನಾದರೂ ಒಂದು ಕುಂದು ಕೊರತೆಯನ್ನು ಕಂಡು ಹುಡುಗಿಯರನ್ನು ನಿರಾಕರಿಸುತ್ತಿದ್ದ ಆತನನ್ನು ಅದೊಂದು ದಿನ ನೋಡಿದ ಹುಡುಗಿಯೇ ಬೇಡವೆಂದು ಹೇಳಿದಾಗ ಆತನಿಗೆ ತಾನು ನಿರಾಕರಿಸಿದ ಹುಡುಗಿಯರ ಪರಿಸ್ಥಿತಿಯ ಅರಿವಾಯಿತು
[10/01, 2:57 PM] pankajarambhat: ನ್ಯಾನೊ ಕಥೆ (ಗಂಡು ಮಗು) 
ತಮಗೆ ಗಂಡು ಮಗುವೇ ಆಗಬೇಕು  ಎನ್ನುವ ಹುಚ್ಚಿನಲ್ಲಿ ಆತ ಪ್ರತೀಬಾರಿ ಹೆಂಡತಿ ಗರ್ಭ ದರಿಸಿದಾಗಳೂ ಹೆಣ್ಣೆಂದು ತಿಳಿದ ತಕ್ಷಣ ನಿರ್ದಾಕ್ಷಿಣ್ಯವಾಗಿ ಅಭಾರ್ಷನ್ ಮಾಡಿಸುತ್ತಿದ್ದ ಕೊನೆಗೂ ಗಂಡು ಮಗುವನ್ನು ಪಡೆಯುವಲ್ಲಿ ಸಫಲನಾದ ಆತ  ಈಗ ತನ್ನ ಮಗನಿಗೆ ಮದುವೆಗೆ  ಹೆಣ್ಣು ಹುಡುಕುವ ಭರದಲ್ಲಿ ಇದ್ದಾನೆ 
ಪಂಕಜಾ. ಕೆ.
[10/01, 3:02 PM] pankajarambhat: ತಾರತಮ್ಯ  (ನ್ಯಾನೊ ಕಥೆ)

ಹೆಣ್ಣು ಮಗುವಿಗೇಕೆ ವಿದ್ಯೆ ಎಂದು  ಎಸ್ .ಎಸ್.ಎಲ್ ಸಿ. ಯಲ್ಲಿ ಉತ್ತಮ ಅಂಕ ಪಡೆದರೂ ಮಗಳನ್ನು ಮನೆಕೆಲಸಕ್ಕೆ ಹಚ್ಚಿದ ತಂದೆ ತಾಯಿಯರು  ಮಗನನ್ನು ಮಾತ್ರ ಚೆನ್ನಾಗಿ ಓದಿಸುತ್ತಾರೆ ಆದರೆ ಓದಿ ಕೆಲಸಕ್ಕೆ ಸೇರಿದ ಮಗ ತಂದೆ ತಾಯಿಯರಿಗೆ ಹೇಳದೆ ತನ್ನ ಸಹೋದ್ಯೋಗಿಯನ್ನು ಮದುವೆಯಾದಾಗ ಕುಸಿದ ತಂದೆ ತಾಯಿಯರನ್ನು ಸಮಾಧಾನಿಸಿ  ತಾನೇ ಕೆಲಸಕ್ಕೆ ಸೇರಿ ಅವರನ್ನು ಸಾಕುವುದು ಕಂಡಾಗ ತಾವು ಮಾಡಿದ ತಾರತಮ್ಯ ನೆನೆದು ವೃದ್ಧ ದಂಪತಿಗಳ ಕಣ್ಣು ಒದ್ದೆಯಾಗುತ್ತದೆ

ಪಂಕಜಾ.ಕೆ
[10/01, 3:07 PM] pankajarambhat: ನಿರೀಕ್ಷೆ
ನ್ಯಾನೊ ಕಥೆ
ತಂದೆ ತಾಯಿ ತಮ್ಮ ಮಗ ಚೆನ್ನಾಗಿ ಓದಿ ದೊಡ್ಡ ಆಫೀಸರ್ ಆಗಲಿ ಎಂದು ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುತ್ತಿದ್ದರು .ಎಷ್ಟೇ ಕಷ್ಟವಿದ್ದರೂ ಮಗ ಕೇಳಿದ ತಕ್ಷಣ ಹಣ ಕಳುಹಿಸುತ್ತಿದ್ದರು 
ಆಶಿಕ್ಷಿತರಾಗಿದ್ದ ಅವರು ಮಗ ಆಫೀಸರ್ ಡ್ರೆಸ್ ನಲ್ಲಿಜುಂ ಎಂದು ಓಡಾಡುವ ಕನಸು ಕಾಣುತ್ತಿದ್ದರು  ಆದರೆ ಅದೊಂದು ದಿನ ಹಾಸ್ಟೆಲ್ ಹುಡುಗರು ಮಗನನ್ನು ಮನೆಗೆ ತಂದು ಬಿಟ್ಟಾಗ ಆ ವೃದ್ಧ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ ಮಗ ಡ್ರಗ್ ಅಡಿಕ್ಟ್ ಆಗಿದ್ದ
ಪಂಕಜಾ.ಕೆ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...