ಒಲವ ನಿವೇದನೆ
ನಿನ್ನನು ನೋಡಿದ
ನನ್ನಯ ಮನವದು
ತಣ್ಣಗೆ ಕಣಿಯಿತು ನವಿಲಂತೆ
ಕಣ್ಣಲಿ ಬಯಕೆಯು
ಹೊನ್ನಿನ ತೆರದಲಿ
ನಿನ್ನನು ಸೇರಲು ಬಂದಿಹೆನು
ಒಲವನು ಸುರಿಸುತ
ಬಲವನು ಕೊಡುತ
ಛಲದಲಿ ಸೇರುವೆ ಮನದನ್ನೇ
ಕನಸಲಿ ಕಾಡುತ
ಮನಸಲಿ ನಿಲ್ಲುತ
ತರು ನೀ ಎನಗೆ ಶುಭವನ್ನೇ
ನಿನ್ನೊಡನಾಟವೇ
ನನ್ನೆದೆ ತುಂಬಿದೆ
ನನ್ನಯ ಉಸಿರೇ ನೀನಾದೆ
ಕಣ್ಣಲಿ ನಿನ್ನಯ
ಬಣ್ಣವ ತುಂಬಿಹೆ
ಮುನ್ನಿನ ವಿಷಯವ ಅರುಹುವೆನು
ಚಂದದ ಹೂವನು
ಅಂದದಿ ಹಿಡಿದು
ಮಂಡಿಯ ನೂರುತ ಕಾದಿರುವೆ
ಮುಂದೆಯೇ ನಿಲ್ಲುತ
ಮುಂದಿನ ದಿನದಲಿ
ಚಂದದಿ ಜೀವನ ನಡೆಸುವ ಬಾ
ಮೋಹದ ಅಮಲಲಿ
ಬಯಕೆಯ ಬಲೆಯಲಿ
ಸಿಲುಕುತ ನಾನು ನರಳಿರುವೆ
ಒಲವನು ಸುರಿಸಿ
ನಲಿವನು ಹರಿಸಿ
ಬಾಳನು ಬೆಳಗಲು ಬಾರೇ ಸಖಿ
ಪಂಕಜಾ.ಕೆ.
Comments
Post a Comment