ಮೂಕಾಂಬಿಕಾ ಭಕ್ತಿಗೀತೆ
ಕೊಡಚಾದ್ರಿ ತಪ್ಪಲಲಿ
ದಟ್ಟ ಕಾಡಿನ ಮಧ್ಯದಲಿ
ನೆಲೆಸಿರುವ ತಾಯಿ ಮೂಕಾಂಬಿಕೆ
ದುಷ್ಟರನು ಶಿಕ್ಷಿಸುತ
ಶಿಷ್ಟರನು ಪೊರೆಯಲೆಂದು
ಅವತಾರವೆತ್ತಿರುವ ದೇವಿ ಮೂಕಾಂಬಿಕೆ
ಮೂಕಾಸುರನ ಸಂಹರಿಸಿ
ಕೋಲ ಮಹರ್ಷಿಗಳಿಗೆ ಅನುಗ್ರಹಿಸಿ
ಕೊಲ್ಲೂರ ಪುರದಲ್ಲಿ ನೆಲೆನಿಂತೆಯೇ
ಆದಿಶಂಕರರಿಗೆ ಒಲಿದು
ಸಕಲ ಜೀವಗಳ ರಕ್ಷಿಸುವ
ಆದಿಶಕ್ತಿ ರೂಪತಾಳಿದ ಮೂಕಾಂಬಿಕೆ
ನೆನೆಯುವೆನು ಅನುದಿನವು
ಕರುಣೆಯಲಿ ಕಾಯಮ್ಮ
ನಮ್ಮನ್ನು ಜಗದಂಬಿಕೆ
ಕೋಟಿ ದೇವರಿಗೆ ಸಮವೆಂದು
ಅರ್ಚಿಸುವರು ನಿನ್ನನ್ನು
ಕರುಣೆಯಲಿ ನೋಡಮ್ಮ ಜಗದಂಬಿಕೆ
ಪಂಕಜಾ.ಕೆ
Comments
Post a Comment