ಒಲವಿನ ಕುಡಿ
ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿ
ಅವತರಿಸಿ ಬಂದ ಈ ಮುದ್ದು ಕಂದ
ನಮ್ಮ ಬಾಳಿಗೆ ಬೆಳಕಾಗುವ ಆನಂದ
ಎಂದೆಂದೂ ನೀ ನಗುತ್ತಿರು ನನ್ನೊಡಲ ಕಂದ
ನನ್ನೆದೆಯ ಬಾಂದಳಕೆ
ನೀ ಬೆಳಕಾಗಿ ಬಂದೆ
ನಮ್ಮ ಪ್ರೇಮಕೆ ನೀ ಪ್ರತೀಕವನಿತ್ತೆ
ನನ್ನೊಲವೇ ಕೊಡುವೆ ನಿನಗೆ ಈ ಸವಿ ಮುತ್ತನಿಲ್ಲೆ
ಪ್ರೀತಿಯ ಮುತ್ತೊಂದ ಹಣೆಗೆ ಒತ್ತಿ
ಕೊಡುವೆ ನಿನಗೆ ನನ್ನೆದೆಯ ಅಮೃತ
ಬಾ ಮಗುವೇ ನೀ ನಮ್ಮ
ಮನೆ ಬೆಳಗುವ ಜ್ಯೋತಿ
ತಾಯ್ತನದ ಭಾರದಲಿ
ನಲಿದಾಡುವ ಮಾತೇ
ಮೈ ಮನದ ನೋವ ಕಳೆಯಲು
ನಿನ್ನೊಡಲ ಪ್ರೀತಿಗಿದೋ ಕೊಡುವೆ
ನಿನಗೆ ನನ್ನ ಈ ಸವಿ ಮುತ್ತ ಅರಸಿ
ಪಂಕಜಾ.ಕೆ.
Comments
Post a Comment