ಪ್ರಕೃತಿ ಐಸಿರಿ
ಹಸಿರು ಗುಡ್ಡ ಬೆಟ್ಟಗಳ ಬೆಳಕು
ಜುಳು ಜುಳು ಹರಿಯುವ ತೊರೆಯ ಝಳಕು
ಹಾಡುವ ಕೋಗಿಲೆಯ ಗಾನದ ಇಂಪು
ಅರಳಿರುವ ಹೂಗಳ ಗಂಧದ ಕಂಪು
ಪ್ರಕೃತಿ ಸಾನಿಧ್ಯದಲಿರಲು ಮೈ ಮನಕೆ ಪುಳಕ
ತುಂಬುತಿದೆ ಮನದಲ್ಲಿ ಕನಸುಕಾಣುವ ತವಕ
ಭೂರಮೆಯ ಸೌಂದರ್ಯ ಸವಿಯುವ ಆನಂದ
ಬೀಸುವ ತಂಗಾಳಿಯಲಿ ಮನಕೆ ತುಂಬುತಿದೆ ಮುದ
ಹಸಿರ ಸಿರಿಯಲಿ ಪವಡಿಸಿರಲು
ಹಕ್ಕಿಗಳ ಚಿಲಿ ಪಿಲಿಗಾನದ ಜೋಗುಳ
ಎನಿತು ಚೆಲುವಿನ ನೋಟ ತುಂಬಿದೆ ಈ ಬುವಿಯಲಿ
ಚೆಲುವ ಸವಿಯುತ್ತಾ ಪ್ರಕೃತಿಯಲಿ ನಲಿ
ಪಂಕಜಾ .ಕೆ.
Comments
Post a Comment