ಗಜಲ್ (ಹುಚ್ಚು ಬಗ್ಗೆ)
ಮೂಡಣದಲಿ ಬೆಳಕಿನ ಕಿರಣಗಳು ಹರಡಿದೆ ನಲ್ಲ
ಬಾನಿನಲಿ ಚೆಲು ಬಣ್ಣಗಳು ಕಲಸಿದೆ ನಲ್ಲ
ಪ್ರಕೃತಿಯ ಮಡಿಲಿನಲಿ ನಲಿದಾಡುವ ಹುಚ್ಚು ಆಶೆ
ಮನದಲ್ಲಿ ಭೃಂಗಗಳ ಝೇಂಕಾರ ತುಂಬಿದೆ ನಲ್ಲ
ಬಣ್ಣ ಬಣ್ಣದ ದುಂಬಿಗಳು ಹೂಗಳ ಸುತ್ತ ಹಾರಡುತಿವೆ
ಹಸಿರು ಸೆರಗು ಹಾಸಿದ ಭೂರಮೆ ಕಣ್ಣ ಸೆಳೆದಿದೆ ನಲ್ಲ
ವಸುಂದರೆಯ ಒಡಲಿನಲಿ ಎಷ್ಟೆಲ್ಲಾ ವೈಚಿತ್ರವಿದೆ
ಅರಿಯುವ ಮನಸು ಬೇಕಿದೆ ನಲ್ಲ
ಇಬ್ಬನಿಯ ಸ್ಪರ್ಶ ಹಿತಕೊಡುತ್ತಿದೆಯಲ್ಲ ಪಂಕಜಾ
ಚಳಿಯು ಮೈ ಮನವ ಕೊರೆಯುತಿದೆ ನಲ್ಲ
ಪಂಕಜಾ.ಕೆ.
Comments
Post a Comment