ಕಾವ್ಯ ಕೂಟ ವಾಟ್ಸಪ್ ಬಳಗದಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಕವನ
ಸುಗ್ಗಿ ಹಬ್ಬ (ಜಾನಪದ ಶೈಲಿ)
ಸುಗ್ಗಿಯ ಸಂಭ್ರಮ
ಮೂಡೈತೆ ಮನೆಯಾಗ
ಅರಮನೆಯ ವೈಭೋಗ
ಕಾಣುತೈತೆ ಧರೆಯಾಗ
ಅರಮನೆಯ ವೈಭೋಗ
ಕಾಣುತೈತೆ ಧರೆಯಾಗ
ಭೂತಾಯಿ ಬೆಳೆಕೊಟ್ಟು
ನಗುತಾಳ
ಗದ್ದೆಯ ಬಣದಲ್ಲಿ
ತೆನೆ ತುಂಬಿ ಬಂದೈತೆ
ತೆನೆತುಂಬಿ ಬಂದೈತೆ ನಮ್ಮವ್ವ
ಭೂತಾಯಿ ನಮ್ಮನ್ನು ಹರಸ್ಯಾಳ
ಮನೆಯಲ್ಲಿ ಬೆಳೆ ತುಂಬೈತೆ ನಮ್ಮವ್ವ
ಮನೆತುಂಬಾ ಸಂತೋಷ ಹರಡೈತೆ
ಮನೆತುಂಬಾ ಸಂತೋಷ
ಹರಡೈತೆ ನಮ್ಮವ್ವ
ಶಿವ ಮೆಚ್ಚಿ ಕಣ್ಣು ಬಿಟ್ಯಾನ
ಎಳ್ಳು ಬೆಲ್ಲಾ ಕೊಟ್ಟಾಳೆ ನಮ್ಮವ್ವ
ಹುಗ್ಗಿಯ ಪಾಯಸ ಮಾಡವ್ವ
ಹುಗ್ಗಿಯ ಪಾಯಸ ಮಾಡವ್ವ ನಮ್ಮವ್ವ
ಮನೆದೇವರಿಗೆ ನೈವೇದ್ಯ ಇಡಬೇಕವ್ವ
ಹಿಡಿಬೀಜ ಬಿತ್ತಿವ್ನಿ
ನಾನಂದು ನೋಡವ್ವ
ಕಣಜ ತುಂಬಾ ಕಾಳು
ಕೊಟ್ಯಾನ ಮಾದೇವ
ಕಣಜ ತುಂಬಾ ಕಾಳು
ಕೊಟ್ಯಾನ ಮಾದೇವ
ಹೊತ್ತಾರೆ ಮಾದೇವನ
ನೆನೆಯ ಬೇಕವ್ವ
ಕಷ್ಟಕ್ಕೆ ಬೆಲೆ ಬಂದೈತ್ಯವ್ವ
ಸಂತೋಷ ಸಂಭ್ರಮ
ಪಡಬೇಕವ್ವ
ಸಂಕ್ರಾಂತಿ ಹಬ್ಬದಿ
ಎಳ್ಳು ಬೆಲ್ಲಾ ಬೀರಿ
ಮನೆ ಮಂದಿಎಲ್ಲಾ
ಹೊಸಬಟ್ಟೆ ತೊಟ್ಟು ನಲಿಯೋಣ ಬಾರೆವ್ವ
ಸುಗ್ಗಿಯ ಸಂಭ್ರಮ ನೋಡವ್ವ
ಪಂಕಜಾ.ಕೆ
Comments
Post a Comment