[28/12/2019, 2:03 PM] pankajarambhat: ಶಾಯರಿ
ನಾಳೆ
ಇಂದು ಮಾಡಬೇಕಿದ್ದ ಕೆಲಸ
ನಾಳೆ ಮಾಡೋಣವೆಂದು
ಉದಾಸೀನ ಮಾಡಿದ
ಆ ನಾಳೆ ಎನ್ನುವುದು
ಜೀವ ಹೋಗುವತನಕ ಬರಲೇ ಇಲ್ಲ
ಪಂಕಜಾ.ಕೆ.
[28/12/2019, 2:08 PM] pankajarambhat: ಶಾಯರಿ
ಕಣ್ಣೋಟ
ತನ್ನನ್ನೇ ನೋಡುವ ಆಕೆಯನ್ನು ಕಂಡು ಖುಷಿಯಿಂದ ಸಿಳ್ಳೆ
ಹೊಡೆದ ಗುಂಡ
ಕೆನ್ನೆ ಚುರುಕ್
ಎಂದಾಗಲೇ ಗೊತ್ತಾಗಿದ್ದು ಅಕೆಯದು ಮೆಳ್ಳೆಕಣ್ಣು
ಪಂಕಜಾ.ಕೆ
[28/12/2019, 2:09 PM] pankajarambhat: ಶಾಯರಿ
ಬೆಡಗಿ
ಆತನ ಬಣ್ಣ ಬಣ್ಣದ
ಮಾತುಗಳಿಗೆ ಮರುಳಾಗಿ
ಸಾಕಿ ಸಲಹಿ ವಿದ್ಯೆ ಕಲಿಸಿದ
ಹೆತ್ತವರನ್ನು ಬಿಟ್ಟು
ಅವನ ಜತೆಯಲ್ಲಿ
ಮನೆ ಬಿಟ್ಟ ಹುಡುಗಿ
ಇಂದೀಗ ಕೆಂಪು ದೀಪದ ಬೆಡಗಿ
ಪಂಕಜಾ.ಕೆ
Comments
Post a Comment