ಬಾನ ತೋರಣ
ಪಡುಗಡಲಲಿ ರವಿ ಮರೆಯಾಗುವ ನೋಟ
ರಸಿಕರ ಕಣ್ಮನ ಸೆಳೆಯುವ ಮಾಟ
ಬಾನಲಿ ಕಲಸಿದೆ ಚೆಲುವಿನ ಬಣ್ಣ
ಸೆಳೆಯಿತು ಕವಿಮನಸಿನ ಕಣ್ಣ
ಮುಸುಕಿದ ಮಬ್ಬಿಲಿ ಹೊಳೆಯುವ ಕಿರಣ
ಕಡಲಲಿ ಕಟ್ಟಿದೆ ಬಣ್ಣದ ತೋರಣ
ಚೆಲುವಿನ ರಂಗನು ಬಾನಲಿ ತುಂಬಿ
ಪಡುಗಡಲಲಿ ರವಿ ತೆರಳಿದ ಉಷೆಯನು ನಂಬಿ
ಚೆಲುವಿನ ಚಿತ್ತಾರವ ಬಾನಂಚಲಿ ಕಂಡು
ಕವಿಮನದಲಿ ಉಕ್ಕುತಿದೆ ಕವಿತೆಯ ದಂಡು
ಪಂಕಜಾ.ಕೆ.
Comments
Post a Comment