ಕಥನ ಕವನ
ಬೆಳೆಯ ಸಿರಿ
ಪುಟ್ಟ ಮಗುವು ಆಟವಾಡುತ
ಅಜ್ಜ ಅಜ್ಜಿಯ ಮಡಿಲಿನಲ್ಲಿ
ಬೆಳೆಯತೊಡಗಿತು
ವಂಶಕುಡಿಯ ಬೆಳೆಸುವಲ್ಲಿ
ಸುಖವ ಕಾಣುತ
ಹಿರಿಯರಿದ್ದರು
ಮುದ್ದು ಮಗುವಿನ ಆಟ ಪಾಠ
ಮನಕೆ ಹಿಗ್ಗು ತರುತಲಿರಲು
ಬೆಳೆದ ಮಗುವು ಶಾಲೆಗೆಂದು ಹೊರಟು ಬಿಟ್ಟಿತು
ಅಜ್ಜ ಅಜ್ಜಿ ಬಿತ್ತಿದಂತ ಉತ್ತಮ ಸಂಸ್ಕಾರ ಮಗುವಿನಲ್ಲಿ ಬೆಳೆಯ ತೊಡಗಿತು
ಮೃದು ಮನದ ಚೆಲುವ ಮಗುವು ಅಜ್ಜ ಅಜ್ಜಿಯ ಮಡಿಲಿನಲ್ಲಿ ಬೆಳೆಯತೊಡಗಿತು
ತಂದೆ ತಾಯಿ ಮುದುಕರಾಗ ಲು
ಪ್ರೀತಿಯಿಂದ ಅವರ ಕಂಡು ಚಂದದಿಂದ ಅವರ ಕೂಡಿ ಬಾಳಿ ಹೆಸರ ಗಳಿಸಿದ ಬಿತ್ತಿ ದಂತೆ ಬೆಳೆಯು ಎಂಬ ಸತ್ಯವನ್ನು ಜಗಕೆ ಸಾರಿದ
ಪಂಕಜಾ. ಕೆ
Comments
Post a Comment