ಗಜಲ್
ನಿನ್ನೊಡನಾಟದಲ್ಲಿ ದಿನಗಳು ಕ್ಷಣಗಳಾಗುತಿದೆ ಇನಿಯಾ
ಬಾಳೊಂದು ನಂದನ ವನದಂತೆ ಆಗಿದೆ ಇನಿಯಾ
ನಮ್ಮ ಒಲವಿಗೆ ಸಾಕ್ಷಿಯಾಗುತಿದೆ ಈ ಭಾನು
ತಂಗಾಳಿಯ ತಂಪಿನಲಿ ನಿನ್ನೊಡನೆ ನಲಿಯ ಬೇಕೆನಿಸಿದೆ ಇನಿಯಾ
ನಿನ್ನ ಮೊಹಬ್ಬತ್ ನ ಸವಿಯ ನಿತ್ಯ ಸವಿದಿರುವೆನಲ್ಲ
ಪ್ರೀತಿಯ ಸವಿ ನೀರಿನಲಿ ಮುಳುಗಬೇಕೆನಿಸಿದೆ ಇನಿಯಾ
ಬೆಳದಿಂಗಳು ಹಾಲು ಚೆಲ್ಲಿದಂತೆ ಸುರಿಯುತಿದೆ
ಈ ರಾತ್ರಿಯಲ್ಲಿ ತನುವು ನಿನ್ನ ಸಾಂಗತ್ಯ ಬಯಸಿದೆ ಇನಿಯಾ
ಒಬ್ಬರಿನ್ನೊಬ್ಬರು ಅರಿತು ಬಾಳಿದರೆ ಸ್ವರ್ಗವಲ್ಲವೇ ಪಂಕಜಾ
ಕಷ್ಟ ಸುಖಗಳಲಿ ಜತೆಯಾಗಿರಬೇಕೆನಿಸಿದೆ ಇನಿಯಾ
ಪಂಕಜಾ.ಕೆ.
Comments
Post a Comment