ಲಲಿತ ಪ್ರಬಂಧ
ಹೀಗಿರಲಿ ನಿಮ್ಮ ಹೊಸವರ್ಷ
ವ್ಯವಹಾರದ ಅನುಕೂಲಕ್ಕಾಗಿ ಪಾಶ್ಚಿಮಾತ್ಯ ಕ್ಯಾಲೆಂಡರ್ ಅತ್ಯಗತ್ಯವಾಗಿದೆ ಅದನ್ನೇ ಹೊಸವರ್ಷವೆಂದು ಆಚರಿಸುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕವಾದ ಮಧ್ಯರಾತ್ರಿಯ ಪಾರ್ಟಿ ಕುಡಿತ ಕುಣಿತ ಗಳಲ್ಲಿ ಕಾಲಕಳೆದು ಪಟಾಕಿ ಸಿಡಿಸಿ ಅಜ್ಜನ ಪ್ರತಿಕೃತಿಯನ್ನು ಸುಟ್ಟು ಪರಿಸರ ಮಲಿನ ಮಾಡದೆ ಹೊಸವರ್ಷದಾಗಮನವನ್ನು ಸಾರುವ ಪ್ರಕೃತಿ ಮಾತೆಯನ್ನು ಪ್ರೀತಿಸುತ್ತಾ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ನೆಲಜಲ ಉಳಿಸುವ ಬಗ್ಗೆ ಮನಸ್ಸು ಮಾಡಿ ಅದಕ್ಕಾಗಿ ಶ್ರಮಿಸಬೇಕು
ಹೊಸವರ್ಷದಲ್ಲಿ ಕಳೆದ ವರ್ಷದ ನಮ್ಮ ಬದುಕಿನ ಸಿಂಹಾವಲೋಕನ ಮಾಡಿ
ಕಳೆದ ವರ್ಷದ ನಮ್ಮ ಅನುಭವಗಳೇನು ಒಳ್ಳೆಯದು ಕೆಟ್ಟದರ ಬಗ್ಗೆ ವಿಮರ್ಶಿಸಿ ಈ ವರ್ಷ ನಾವೇನು ಮಾಡಬೇಕು ನಾವೇನು ಮಾಡಬಾರದು ಎಂದು ನಿರ್ಧರಿಸಿ ಭವಿಷ್ಯದ ಜೀವನ ಉತ್ರಮವಾಗಿ ಸಾಗುವಂತೆ ಮುನ್ನಡೆದರೆ ಬದುಕು ಇನ್ನಷ್ಟು ಖುಷಿಯಿಂದ ತುಂಬಬಹುದು ಹೊಸ ವರ್ಷದಲ್ಲಿ ಗತಕಾಲದ ಘಟನೆಗಳನ್ನು ಮೆಲುಕು ಹಾಕಿ ಅವುಗಳಿಂದ ಕಲಿತು ಸಂಭ್ರಮದಿಂದ ಮುನ್ನಡೆಯಬೇಕು
ಹೊಸವರ್ಷದಾಗಮನ ಸಾರುವ ಪ್ರಕೃತಿ ಮೈತುಂಬಿ ಹಸುರುಡುಗೆಯುಟ್ಟು ನವೋಲ್ಲಾಸದಿಂದ ನಲಿಯುವ ವಾತಾವರಣವಿರುವ ದಿನ ಬೇವು ಬೆಲ್ಲವನ್ನು ಹಂಚಿ ಎಲ್ಲರೊಡನೆ ಪ್ರೀತಿವಿಶ್ವಾಸದಿಂದ ಕೂಡಿ ಸಂಭ್ರಮದಿಂದ ಆಚರಿಸಬೇಕು ನಮ್ಮ ಸಂಸ್ಕೃತಿಯನ್ನು ಈ ಮೂಲಕ ನಾವು ಉಳಿಸಿ ಬೆಳೆಸಬೇಕು ಹೊಸವರ್ಷದ ಕನಸುಗಳು ನನಸಾಗಲು ಶ್ರಮಿಸಬೇಕು
ಪಂಕಜಾ .ಕೆ
Comments
Post a Comment