ಕಾವ್ಯಾಂತರಂಗ ಸ್ಪರ್ಧೆಗಾಗಿ
ಗಜಲ್
ಬಾನಂಗಳದಲಿ ತಾರೆಗಳು ಚಂದಿರನಾಗಮನಕೆ ಕಾಯುತಿದೆ ಸಖಿ
ಕೊಳದಲ್ಲಿ ನೈದಿಲೆಗಳು ಅರಳಿ ನಗುತಿದೆ ಸಖಿ
ನೀನು ಜತೆಯಲಿದ್ದಾಗ ದಿನಗಳು ಕ್ಷಣಗಳಾಗುತ್ತಿದ್ದವು
ನೀನಿಲ್ಲದೆ ದಿನಗಳನ್ನು ಕಳೆಯುವುದು ಕಠಿಣವೆನಿಸುತ್ತಿದೆ ಸಖಿ
ತಂಪುಗಾಳಿಯು ಕೂಡಾ ಮನವನ್ನು ತಣಿಸಲಾರದಾಗಿದೆ
ನಾವಿಬ್ವರು ಒಂದಾಗಲು ದಿನಗಳನು ಎಣಿಸಬೇಕಾಗಿದೆ ಸಖಿ
ರಾತ್ರಿಗಳೇ ಬರಲೇಬೇಡಿ ನೀವು ನನ್ನ ಮುತ್ತಿ ಕಾಡಲು
ನಿದಿರೆಯಿಲ್ಲದೆ ಕಣ್ಣುಗಳು ಉರಿಯುತ್ತಿದೆ ಸಖಿ
ಆಶೆಗಳ ಕುದುರೆಗಳು ನಿತ್ಯವೂ ಬಂದು ಕೆಣಕುತಿವೆ ಮನಸನ್ನು
ಕಡಿವಾಣ ಹಾಕಿ ಹಿಡಿದೆಳೆದು ಸಾಕಾಗಿದೆ ಸಖಿ
ನಿನ್ನೊಡನಾಟವಿದ್ದಾಗ ಮನಸು ನವಿಲಂತೆ ಕುಣಿಯುತ್ತಿತ್ತು
ಬಿಸಿಲಿಗೆ ಬಾಡಿದ ತರುಲತೆಯಂತಾಗಿದೆ ಸಖಿ
ಬಾಳ ಪಯಣದಲಿ ಜತೆಯಾಗಿ ಸಾಗಬೇಕಲ್ಲ ಪಂಕಜಾ
ಹಿರಿಯರ ಒಪ್ಪಿಗೆಯ ಮುದ್ರೆಗಾಗಿ ಕಾಯಬೇಕಾಗಿದೆ ಸಖಿ
ಪಂಕಜಾ.ಕೆ.
Comments
Post a Comment