ಭಾವಗೀತೆ
(ಕಾವ್ಯ ಕೂಟ ವಾಟ್ಸಪ್ ಬಳಗದಲ್ಲಿ ತೃತೀಯ ಸ್ಥಾನ ಪಡೆದ ನನ್ನ ಭಾವಗೀತೆ)
ದತ್ತಪದ ಕರಿನೆರಳು
ಒಲವ ತೇರು
ಬಾಂದಳದಿ ಮಿನುಗುವ ಬೆಳ್ಳಿ ಚುಕ್ಕೆ ಗಳು
ನಿನ್ನ ಕಣ್ಣೋಟದಂತೆ ಸೆಳೆಯುತಿದೆ
ಕಗ್ಗತ್ತಲೆಯಲಿ ಮಿಂಚೊಂದು ಸುಳಿದಂತೆ
ನನ್ನ ಬರಡು ಬಾಳಿಗೆ ನೀ ಜತೆಯಾದೆ
ನಿನ್ನೆದೆಯ ಬಾಂದಳದಿ ಮಿನುಗುವ ತಾರೆ ನಾನಾದೆ
ನಿನ್ನ ಪ್ರೀತಿಯ ಜಲ ಸೋಕಿ ನಾ ನವಿಲಾದೆ
ನಮ್ಮಿಬ್ಬರ ಈ ಒಲವ ಬಾಳ ತೇರಿನಲಿ
ಮುನಿಸೆನ್ನುವ ಕರಿ ನೆರಳು ಸೋಕದಿರಲಿ
ಕಷ್ಟ ಸುಖಗಳಲಿ ಜತೆಯಾಗಿ
ಅನುದಿನವೂ ಜೋಡಿ ಹಕ್ಕಿಗಳಂತೆ ಬಾಳೋಣ
ಪಂಕಜಾ.ಕೆ.
Comments
Post a Comment