ಕಾವ್ಯಕೂಟ ವಾಟ್ಸಪ್ ಬಳಗದಲ್ಲಿ ಪ್ರಥಮ ಸ್ಥಾನ ಪಡೆದ ನನ್ನ ಭಾವಗೀತೆ
ದತ್ತಪದ ಮನದಾಸೆ
ಒಲವ ಗಾನ. (ಭಾವಗೀತೆ)
ನಿನ್ನ ಒಲವ ಗಾನಕೆ ಮೈ ಮರೆತು ಎದೆ ತುಂಬಿದೆ
ನಿನ್ನಲ್ಲೇ ಒಂದಾಗುವ ಆಸೆ ನನ್ನಲ್ಲೆಕೋ ಬಂದಿದೆ l ಪl
ಮನವಿಂದು ಹಕ್ಕಿಯಾಗಿ ಹಾರಾಡಿದೆ
ನೂರೊಂದು ನೆನಪುಗಳು ಇಂದೇಕೋ ಕಾಡಿದೆ
ಬಾಳೊಂದು ಸುಂದರ ವನವಾಗಿದೆ
ನೀಜತೆಯಲಿರಲು ಹೂವಿನ ಹಾಸಿಗೆಯಾಗಿದೆ
ನನ್ನ ಮನದಾಸೆ ಹೇಳಲೇನು ನಲ್ಲ
ನೀ ಬಂದು ನನ್ನೊಮ್ಮೆ ಬಿಗಿದಪ್ಪುವಿಯಲ್ಲ
ಬಾಳಲ್ಲಿ ಚೆಲು ಹೂವುಗಳು ಅರಳಿಸುವಿಯಲ್ಲ
ನಳನಳಿಸಿ ಹೊಸ ಕಾಂತಿ ಚಿಮ್ಮಿಸುವೆಯಲ್ಲ
ನನ್ನೊಡಲ ತುಂಬಾ ಹೊಸ ಕನಸ ಹಾಸಿರುವೆ
ನೀ ನನ್ನ ಬಾಳ ದೀವಿಗೆಯಾಗಿರುವೆ
ಒಂದಾಗಿ ಅನುದಿನವೂ ಬಾಳಬೇಕಿದೆ
ಅ ದೇವನೊಲುಮೆ ಜತೆಗಿರಲು ಭಯವೆಲ್ಲಿದೆ
ನಿತ್ಯವೂ ಒಲವ ಸವಿಯ ಸವಿಯುವಾಸೆ
ತಂಪುಗಾಳಿಯಲಿ ನಿನ್ನೊಡನೆ ಹೆಜ್ಜೆ ಹಾಕುವಾಸೆ
ಮನದಿಂಗಿತವ ತಿಳಿಸಿ ನಿರಾಳವಾಗುವಾಸೆ
ಅನುದಿನವೂ ನಗು ನಗುತ ಬಾಳು ಸವೆಸುವಾಸೆ
ಪಂಕಜಾ.ಕೆ.
Comments
Post a Comment