ಮುಸುಕಿದ ಮಬ್ಬು
ನಿತ್ಯವೂ ಸುತ್ತಿತಿರುವೆ ಜಗವ ನೀನು
ಚಂದ್ರ ತಾರೆಗಳೆಲ್ಲಾ ನಿನ್ನ ಕಕ್ಷೆಯಲ್ಲೇ
ಕಾಂತಿಯುತ ಕಿರಣವ ಬೀರಿ
ಜಗವ ಬೆಳಗಿವೆ ನಿತ್ಯ ನೀನು
ನಿನ್ನ ಸೌಂದರ್ಯವ ಕಂಡು ಸಹಿಸಲಾರದೆ
ಜಗಳವಾಡಲುನಿನ್ನ ಮುತ್ತಿರುವನೆ ಚಂದ್ರ?
ಜಗವು ಮುಳುಗಿತು ಒಂದು ಕ್ಷಣ ಕತ್ತಲಲ್ಲಿ
ನೀನಿಲ್ಲದಿರೆ ಜಗಕೆ ಬಲವೆಲ್ಲಿ?
ಅಪ್ಪಿದನೆ ಶಶಿ ನಿನ್ನ ಪ್ರೇಮದಲಿ
ತೊಡಿಸಿ ಕಂಕಣವ ಪ್ರೀತಿಯಲಿ
ಬಾನ ಬಯಲಲಿ ನಿಮ್ಮಿಬ್ಬರಾಟ
ಬರಿ ಕಣ್ಣಿನಲ್ಲಿ ನೋಡಲು ದೃಷ್ಟಿ ನಾಶ
ಪಂಕಜಾ.ಕೆ.
Comments
Post a Comment