..ಅಮೃತ ಭುವಿಯಲ್ಲಿ ದುಡಿವ ನೇಗಿಲಯೋಗಿ
ಭೂತಾಯಿ ಮಡಿಲಿಗೆ
ಹಸಿರ ಹೊದಿಕೆಯ ಹೊದಿಸಿ
ಉಣಿಸುವನು ನಮಗೆ ಅನ್ನದಾತ
ಕೋಳಿಕೂಗುವ ಮುನ್ನ
ನೇಗಿಲನು ಹೊತ್ತು
ಹೊಲದಲ್ಲಿ ಉಳುತ ಹಾಡುವನು ರೈತ
ಬಿಸಿಲು ಮಳೆ ಗಾಳಿಗೆಲ್ಲಾ
ಅಂಜದೆಯೇ ಅಳುಕದೆಯೇ
ದುಡಿಯುವನು ನಿತ್ಯ ನಮ್ಮ ಅನ್ನದಾತ
ಅತಿವೃಷ್ಠಿ ಅನಾವೃಷ್ಟಿಗಳ ಕಾಟ
ನಿತ್ಯವೂ ಎಡೆಬಿಡದೆ ದುಡಿದರೂ
ಪ್ರಕೃತಿ ಮುನಿದರೆ ಮಾಡಬೇಕು ಉಪವಾಸ
ಕಾಯಕವೇ ಕೈಲಾಸ ಎನುತ
ದುಡಿಯುವ ಕರ್ಮಯೋಗಿ ಈತ
ಅಮೃತ ಭುವಿಯಲ್ಲಿ ದುಡಿಯುವ ನೇಗಿಲಯೋಗಿ
ದುಡಿಮೆಯೇ ದೇವರೆಂದು ತಿಳಿದಾತ
ಉಣಿಸುವನು ನಮಗೆ ಈತ ನಮ್ಮ ಅನ್ನದಾತ
ಎಂದೆಂದೂ ಸುಖಿಯಾಗಿರಲಿ ಈತ ನಮ್ಮ ಭಾಗ್ಯದಾತ
ಪಂಕಜಾ.ಕೆ.
Comments
Post a Comment