ಕಾವ್ಯಕೂಟ ವಾಟ್ಸಪ್ ಬಳಗದಲ್ಲಿ ಪ್ರಥಮ ಸ್ಥಾನ ಪಡೆದ ನನ್ನ ಗಜಲ್
ದತ್ತ ಪದ..... ನೀಲ ಬಾನಲಿ ಹೊಸ ತಾರೆಯ ಕಂಡೆಯಾ ಸಖ
ಗಜಲ್
ನೀಲಬಾನಲಿ ಹೊಸ ತಾರೆಯ ಕಂಡೆಯಾ ಸಖ
ಒಡಲ ತುಂಬಾ ಸವಿಕನಸ ತುಂಬಿದೆಯಾ ಸಖ
ನನ್ನ ಹೃದಯದ ಮಿಡಿತವು ನಿನ್ನನೇ ನೆನೆದಿದೆ
ಹೊಸ ಬಯಕೆಗಳ ಎದೆಯಲ್ಲಿ ಬಿತ್ತಿದೆಯಾ ಸಖ
ಬಾನ ಬಯಲಲಿ ತಾರೆಗಳು ಮಿನುಗುತಿವೆ
ಬಾಳ ಬಯಲಿಗೆ ನೀ ಜತೆಯಾಗುವೆಯಾ ಸಖ
ಕನಸುಗಳ ತೇರುಗಳು ಮನದಲಿ ತುಂಬಿದೆ
ನನಸು ಮಾಡಲು ನೀನು ಬರುವೆಯಾ ಸಖ
ಆಸೆಗಳೆಲ್ಲಾ ಈಡೇರುವುದೇ ಹೇಳು ಪಂಕಜಾ
ನಿನ್ನ ಒಲವಿನಾಸರೆ ನೀಡಿ ತಣಿಸುವೆಯಾ ಸಖ
ಪಂಕಜಾ.ಕೆ.
Comments
Post a Comment