ಕವನ ಸ್ಪರ್ಧೆ
ದತ್ತಪದ...ಚಂದ್ರಮನ ಇರುಳ ಬೆಳದಿಂಗಳು
ನವೋಲ್ಲಾಸ
ಚಂದ್ರಮನ ಇರುಳ ಬೆಳದಿಂಗಳು
ಮನದಲಿ ತುಂಬಿದೆ ಭಾವನೆಗಳ ಅಮಲು ವಸುಂದರೆಯ ಒಡಲ.ತುಂಬಾ ನೊರೆ ಹಾಲು
ರಾತ್ರಿಯ ನೀರವ ಮೌನದಲಿ
ತರುಲತೆಗಳ ಒಲವ ಗಾನದ ಅಮಲು
ಇಮ್ಮಡಿಸಿದೆ ಭೂರಮೆಯ ಚೆಲುವು
ಚಂದಿರನ ಕಿರಣಗಳು ಇಳೆಯ ತಬ್ಬಿದೆ
ತಂಗಾಳಿಯು ಮೇಘ ಸಂದೇಶವಹೊತ್ತು ತಂದಿದೆ
ವಸುಂದರೆಯ ಒಡಲು
ಬಿರಿದರಳಿದೆ
ತಂಪು ಗಾಳಿಯಲಿ ತೇಲಿ ಬರುತಿದೆ ನವಿರು ಗಂಧ
ನೈದಿಲೆಗಳು ಬಿರಿದರಳಿ ಸ್ವಾಗತವ ಕೋರುತಿದೆ
ನಿನ್ನೊಡನಾಟಕಾಗಿ ಕಾದಿದೆ ತನುವು
ನವಜೋಡಿಗಳಿಗೆ ನವೋಲ್ಲಾಸವ ತುಂಬಿ
ಮದುರಸವ ಹನಿಸುತ್ತಿದೆ ಬೆಳದಿಂಗಳು
ಪಂಕಜಾ.ಕೆ.
Comments
Post a Comment