ದತ್ತಪದ ಭಾವನೆ
ನೆನಪಿನಂಗಳದಿ
ನೀ ಕೊಟ್ಟ ಸವಿಮುತ್ತುಗಳ ನೆನಪು
ನನ್ನ ಕದಪುಗಳಿಗೆ ತರುತಿದೆ ಕೆಂಪು
ಬಾವದಲೆಯಲಿ ತೇಲುತಿದೆ ಮನಸು
ಬಾಳಿನಲಿ ತುಂಬುತಿದೆ ಹೊಸ ಕನಸು
ಭಾವನೆಗಳ ಭಾರದಲಿ ಜಗ್ಗುತಿದೆ ಹೃದಯ
ನಿನ್ನ ಎದೆ ಬಡಿತದಲಿ ನನ್ನ ಕನಸಿದೆ ಗೆಳೆಯ
ಮನದಲ್ಲಿ ತುಂಬಿದೆ ಸವಿ ಕನಸುಗಳ ತೇರು
ಎದೆಬಿರಿದು ಹೊರ ಬರಲಾರದೆ ಆಗಿದೆ ಗೀರು
ಅಂತರಂಗದ ಕದವನು ನಿನಗಾಗಿ ತೆರೆದೆ
ಬಂದು ನೋಡೊಮ್ಮೆ ನನ್ನ ಮನದಾಳವನು ಬರಿದೆ
ಚೆಲ್ಲು ಚೆಲ್ಲಾಗಿ ನಿನ್ನೊಡನೆ ಕುಣಿಯುವ ಬಯಕೆ
ಉಲ್ಲಾಸ ಹುರುಪು ಇಲ್ಲದಿರೆ ಅದೊಂದು ಬದುಕೆ
ಅಂಗಳದ ತುಂಬಾ ಬೆಳದಿಂಗಳು ಚೆಲ್ಲಿದೆ
ನಮ್ಮೊಡನಾಟಕೆ ದಾರಿ ಸುಗಮವಾಗಿದೆ
ಒಂದಾಗಿ ಅನುದಿನವೂ ನಲಿಯೋಣ ಬಾ ನಲ್ಲ
ಈ ದಿನಗಳು ನಮಗಾಗಿ ಆ ದೇವನಿತ್ತಿಹನಲ್ಲ
ಪಂಕಜಾ.ಕೆ.
Comments
Post a Comment