ಭಾವಯಾನ (ಭಾವಗೀತೆ)
ಚುಮು ಚುಮು ಚಳಿಯು ಲಗ್ಗೆಯಿಟ್ಟಿದೆ
ಮೈಮನಕೆ ಜಡತೆಯನು ತಂದೊಡ್ಡಿದೆ
ಮಾಮರದ ತುಂಬೆಲ್ಲ ಹೂಗಳರಳಿದೆ
ಕೋಗಿಲೆಯು ಮಧುರವಾಗಿ ಕುಕಿಲಿಡುತ್ತಿದೆ
ಭೂರಮೆಯು ಹಸಿರುಟ್ಟು ತೊನೆದಾಡಿದೆ
ದುಂಬಿಗಳು ಮಧುಹೀರುತ ನಲಿದಾಡಿವೆ
ನಿನ್ನೊಡನೆ ಪ್ರಕೃತಿಯಲಿ ನಲಿದಾಡೋ ಆಸೆ
ಅನುರಾಗದ ಅಲೆಗಳಲಿ ತೇಲಾಡೋ ಬಯಕೆ
ಕಣ್ಣಿನಲ್ಲಿ ನಿನ್ನ ರೂಪ ತುಂಬಿ ನಿಂತಿದೆ
ಮನದಲ್ಲಿ ಪ್ರೇಮಗಾನ ಗುಣುಗುಣಿಸಿದೆ
ನನ್ನೆದೆಯ ವೀಣೆಯನು ನೀ ಮೀಟಿದೆ
ಹೊಸರಾಗ ಹೊಸ ಬಯಕೆ ಹುಚ್ಚೆದ್ದಿದೆ
ಆಸೆಗಳ ದುಂಬಿಗಳು ಮನ ಕೊರೆದಿದೆ
ನೂರಾರು ಹೊಸ ಕನಸ ನೀ ಬಿತ್ತಿದೆ
ಪಂಕಜಾ.ಕೆ.
Comments
Post a Comment