ಸಿಗ್ನೇಚರ್ ಲೈನ್ 40
ಸ್ಪರ್ಧೆಗಾಗಿ
ದತ್ತ ಪದ.
.ಧನಧಾನ್ಯ ತುಂಬಿ ತುಳುಕಿ
ಬಾಳಿನಲ್ಲಿ ನಂದನ
ಸ್ನೇಹ ಪ್ರೀತಿ ಜತೆಗೆ ಇರಲು
ಸಂಕ್ರಮಣದ ಸಂಭ್ರಮ
ಸುಗ್ಗಿಯ ಸಂಭ್ರಮ
ಭಾಸ್ಕರನು ಬದಲಿಸಿದ ತನ್ನ ಪಥ
ಉತ್ತರಾಯಣಕೆ ಚಲಿಸಿತು ಅವನ ರಥ
ಮಾಗಿಯ ಚಳಿಗಾಳಿ ಮೈ ಕೊರೆದಿದೆ
ವಸಂತಾನಾಗಮನವು ಮುದ ತಂದಿದೆ
ಮಾಮರದ ಮೈತುಂಬ ಹೂವು ಅರಳಿದೆ
ಕೋಗಿಲೆಯು ಸಂತಸದಿ ಕುಕಿಲಿಡುತಿದೆ
ಚುಮು ಚುಮು ಚಳಿಯು ಕೊರೆದಿದೆ ತನುವ
ಮಂಜಿನ ಬೆಟ್ಟವು ತಬ್ಬಿಹುದು ಇಳೆಯ
ಅರಳಿರುವ ಹೂವುಗಳು ಸೂಸುತಿವೆ ಕಂಪು
ಬೀಸುವ ಚಳಿಗಾಳಿ ತರುತಿದೆ ತಂಪು
ಮಂಜು ಮುಸುಕಿದ ಹಾದಿಯ ನೋಟ
ಮಧುಹೀರ ಬರುತಿರುವ ದುಂಬಿಗಳ ಕಾಟ
ಸುಗ್ಗಿಯ ಖುಷಿ ತಂದ ಸಂಕ್ರಾಂತಿ ಹಬ್ಬ
ಎಳ್ಳು ಬೆಲ್ಲವ ಹಂಚಿ ಖುಷಿ ಪಡುವ ಹಬ್ಬ
ಸುಗ್ಗಿಯ ಸಡಗರ ಮನೆ ತುಂಬಿದೆ
ಫಸಲಿನ ಸಂಭ್ರಮ ಮನ ತುಂಬಿದೆ
ಧನಧಾನ್ಯ ತುಂಬಿ ತುಳುಕಿ ಬಾಳಿನಲಿ ನಂದನ
ಸ್ನೇಹ ಪ್ರೀತಿ ಜೊತೆಗೆ ಇರಲು ಸಂಕ್ರಮಣದ ಸಂಭ್ರಮ
ಪಂಕಜಾ.ಕೆ.
Comments
Post a Comment