ನವಪರ್ವ ಫೌಂಡೇಶನ್ (ರಿ) ಬಳಗದಲ್ಲಿ ಅತ್ಯುತ್ತಮ ಬರಹವೆಂದು ಪರಿಗಣಿಸಿದ ನನ್ನ ಕವನ
ಸಮಯದ ಗೆಳೆಯ
ಗೋಡೆಯ ಮೇಲಿನ ಗಡಿಯಾರ
ಸಮಯವ ತಿಳಿಯಲು ಆಧಾರ
ಟಿಕ್ ಟಿಕ್ ಎನ್ನುತ ತಿರುಗುವ ಮುಳ್ಳು
ನಿಮಿಷವು ಗಂಟೆಗಳಾಗುತ ಬಡಿವುದು ಬೆಲ್ಲು
ಸೆಕೆಂಡ್ ನಿಮಿಷವು ತಾಸುಗಳಾಗಿ
ಉರುಳುವ ದಿನಗಳು ವರ್ಷಗಳಾಗಿ
ವರ್ತಮಾನವು ಭೂತಕೆ ತಿರುಗಿ
ಓಡುವ ಸಮಯವ ಹಿಡಿಯಲುಬಹುದೇ?
ಬಡವ ಬಲ್ಲಿದ ಬೇಧವ ತೋರದೆ
ಹಗಲಿರುಳೆನ್ನದೆ ನೀ ನಡೆವೆ
ಟಿಕ್ ಟಿಕ್ ಎನ್ನುತ ಓಡುತಲಿರುವೆ
ರವಿಯ ನೆರಳಲೇ ನಿ ಚಲಿಸುತಲಿರುವೆ
ಅನುದಿನ ಕಾಯಕ ಮಾಡುತಲಿರುವೆ
ಸಮಯದ ಗೆಳೆಯನೇ ನೀನಾದೆ
ಪಂಕಜಾ.ಕೆ
Comments
Post a Comment