Skip to main content

ನೆನಪಿನ ದೋಣಿ ಚಿತ್ರ ಕವನ

ಚಿತ್ರ ಕವನ ಸ್ಪರ್ಧೆಗಾಗಿ

ನೆನಪಿನ ದೋಣಿ

ಊರ ಮುಂದಿನ   ಬಾವಿಕಟ್ಟೆ
ಹೆಂಗಳೆಯರ ಹರಟೆಯ ಕಟ್ಟೆ

ನೀರೆಯ  ನಡುವಿನಲ್ಲಿ ಒಂದು ಕೊಡ
ನೀರ ಸೆಳೆಯುವ ರಾಟೆಯ ಗಡ ಗಡ

ನಿತ್ಯವೂ ಹೆಂಗಳೆಯರ ಕಲರವ
ಕೈ ಬಳೆಗಳ ಕಿಂಕಿಣಿ ನಾದದ ತರಂಗ

ಮನೆ ಮನೆಯ ಸುಖದುಃಖದ ಕಥೆ
ಹಂಚಿ ಸಾಂತ್ವನಿಸುವ ತಾಣವಂತೆ

ಸುತ್ತಲೂ ತುಂಬಿದೆ ಕಸಕಡ್ಡಿಗಳ ಲೋಕ
ಗತಕಾಲದ ವೈಭವದ ಪ್ರತೀಕ

ಇಣಿಕಿ ನೋಡುವವರಿಲ್ಲದೆ ಪಾಳುಬಿದ್ದಿದೆ ಬಾವಿ
ಹಿಂದಿನ ವೈಭವವ ಪಳೆಯುಳಿಕೆಯಾಗುತ್ತಿದೆ ಬಾವಿ

ಮನೆ ಮನೆಯಲೂ ಕೊಳವೆ ಬಾವಿಯದೇ ಲೋಕ
ಗುಂಡಿ ಒತ್ತಿದರೆ ಸುರಿಯುವ ಜಲಧಾರೆಯದೆ ಜಳಕ

ನೀರ ಸೆಳೆಯುವ ರಾಟೆಯ ಗಡ ಗಡ ಸದ್ದಿಲ್ಲ
ಬಾವಿಕಟ್ಟೆಯಲಿ ಹೆಂಗಳೆಯರ ಕಲರವವಿಲ್ಲ

ಬಾವಿಯೊಳಗಿನ  ಕಪ್ಪೆಯಂತೆ ಜೀವನ
ಪ್ರತಿಯೊಂದು ಮನೆಗೂ ಭದ್ರಗೇಟಿನ ಆವರಣ

ನೆನಪಿನ ದೋಣಿಯಲಿ ತೇಲುತ್ತಿದೆ ಮನ
ಬಂದೀತೇ ಇನ್ನೊಮ್ಮೆ ಅಂತಹ ದಿನ

ಪಂಕಜಾ.ಕೆ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...