ಗುಬ್ಬಿ ಹಕ್ಕಿ
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಅತ್ತ ಇತ್ತ ಕತ್ತು ಕೊಂಕಿಸಿ
ಸುತ್ತ ಮುತ್ತ ನೋಡಿ
ಪುಟ್ಟ ಹಕ್ಕಿ ಹಾರಿ ಹಾರಿ ಬಂದಿತು
ಕಸ ಕಡ್ಡಿ ಹೆಕ್ಕಿ ತಂದು
ಮಾಡ ಎಡೆಯಲಿಟ್ಟಿತು
ಚಂದದಿಂದ ಗೂಡು ಕಟ್ಟಿ
ಇನಿಯನೊಡನೆ ನಲಿಯಿತು
ಚಿವ್ ಚಿವ್ ಎಂದು ಹಾಡಿ
ಮೊಟ್ಟೆ ಗಳನು ಇಟ್ಟಿತು
ಕಾವು ಕೊಡಲು ಮೊಟ್ಟೆಯೊಡೆದು
ಮರಿಯು ಹೊರಗೆ ಬಂದಿತು
ಕಾಳು ಕಡ್ಡಿ ಹೆಕ್ಕಿ ತಂದು
ಗುಟುಕು ಕೊಡುತ
ಮರಿಗಳನ್ನು ಸಲಹಿತು
ರೆಕ್ಕೆಬರಲು ಮರಿಗಳಿಗೆ ಹಾರಲದು ಕಲಿಸಿತು
ಮೊಬೈಲ್ ಶಬ್ಧ ಕೇಳುತಲಿ
ದೂರ ಸರಿದು ಹೋಯಿತು
ಎಲ್ಲಿ ಹೋದೆ ಪುಟ್ಟ ಗುಬ್ಬಿ
ನಿನ್ನ ಸುಳಿವು ಕಾಣದು
ಮರ ಗಿಡಗಳ ಕಡಿದು
ನಿನಗೆ ನೆಲೆಯು ಇಲ್ಲದಾಯಿತೆ
ಮಾನವನ ದುರಾಶೆಗೆ
ನಿನ್ನ ಸಂತತಿ ಅಳಿಯಿತೆ
ಪಂಕಜಾ.ಕೆ
Comments
Post a Comment