ಜೀವನದಿ
ಮನದ ನೆಮ್ಮದಿ ಕಳೆದು ಹೋಗಿದೆ
ಎಲ್ಲಿ ಹುಡುಕಲಿ ನಿನ್ನನು
ಸುತ್ತು ಮುತ್ತಲು ಎತ್ತ ನೋಡಲು
ತುಂಬಿಕೊಂಡಿದೆ ವಂಚನೆ
ಕಪಟ ಮನುಜರ ಮೋಸ ದಾಟಕೆ
ಜೀವ ಸಂಕುಲ ನರಳಿದೆ
ಮನುಜ ಮನುಜರಲಿ ದ್ವೇಷ ತುಂಬಿದೆ
ಯಾರ ನಂಬಲಿ ದೇವನೆ
ನಂಬಿಕೆಯ ನೆಲೆಗಟ್ಟು ಮುರಿದಿದೆ
ಈಶ ದಾರಿಯ ತೋರೆಯ
ಜಗದ ಎಲ್ಲೆಡೆ ಶಾಂತಿ ನೆಲೆಸಲಿ
ಕರುಣೆಯಿಂದಲಿ ನೋಡೆಯ
ಪ್ರೀತಿ ಎನ್ನುವ ಜೀವಜಲವಿರೆ
ಬಾಳಲಿರುವುದು ನೆಮ್ಮದಿ
ಆಶೆಗಳನು ಕಡಿಮೆ ಮಾಡುತ
ಮನದಿ ತುಂಬಲಿ ಸಂತಸ
ಪಂಕಜಾ. ಕೆ.
Comments
Post a Comment