ವಿಷಯ ..ಸಾಕು ಮಾಡು ಮೌನ ಬಲ್ಲೆ ನಾ ನಿನ್ನ ಮನ
ನಲ್ಲನಿಗೆ
ಮುಂಗಾರು ಮಳೆಯಂತೆ ನೀ ಬಂದೆ ನನ್ನ ಬಾಳಲಿ
ಒಲವ ರಸ ಸುರಿಸುತ ಮನಕೆ ಮುದ ತಂದೆ
ಹೃದಯದ ತುಂಬೆಲ್ಲ ತುಂಬಿದೆ ನಿನ್ನ ಸವಿಮಾತುಗಳು
ಇಂದೇಕೆ ನೀ ಮೌನವಾಗಿ ನನ್ನ ಕೆಣಕುವೆ ಹೇಳು
ಮಕರಂದ ವ ಹೀರಿ ಹಾರುವ ದುಂಬಿ ನೀನಲ್ಲ
ಮತ್ತೇಕೆ ಮೌನವಾಗಿದ್ದು ನನ್ನ ಕೊಲ್ಲುವೆ ನಲ್ಲ
ನಗು ನಗುತ ಗೋಳು ಹೊಯ್ದು ಕೊಳ್ಳುತ್ತಿದ್ದೆಯಲ್ಲ
ಇಂದೇಕೆ ಈ ಮೌನ ನಾ ಇದನು ತಾಳೆನಲ್ಲ
ಕೋಪತಾಪದಲಿ ನಲುಗಬೇಕೇ ನಮ್ಮ ಜೀವನ
ತಾಳಲಾರೆ ನಾನು ಅಕಾರಣವಾದ ನಿನ್ನ ಈ ಮೌನ
ಒಲವು ಸುರಿಸುವ ನಿನ್ನ ನುಡಿಗಾಗಿ ಕಾತರಿಸಿದೆ
ಹೃದಯದ ಬಾಗಿಲು ತೆರೆದು ಕಾದಿರುವೆ
ಸಾಕು ಮಾಡು ಮೌನ ನಾ ಬಲ್ಲೆ ನಿನ್ನ ಮನ
ಬಂದೊಮ್ಮೆ ಬಿಗಿದಪ್ಪಿ ಸಂತೈಸು ನಲ್ಲ
ಪಂಕಜಾ.ಕೆ
Comments
Post a Comment