ಶರಣಾಗತಿ
ಗೋವಿಂದ ಕಾಪಾಡು
ನಾವಿಂದು ಬೇಡುವೆವು
ಕಾವವನು ನೀನೆಂದು ನಮಿಸುತಿಹೆವು
ಸೇವೆಯನು *ಮಾಡುತಲಿ
ನೋವಿನಲಿ ಬೇಡುವೆವು
ಜೀವಿಗಳ ಕಾಯುತಲಿ ರಕ್ಷಿಸುವೆಯಾ|
ಭರದಿಂದ ಹಬ್ಬುವುದು
ಸರಸರನೆ ಸುಳಿಯುವುದು
ನೆರೆರಾಜ್ಯದಲ್ಲಿಂದ ಬಂದಿರುವುದು
ವೈರಿಯನು ಸದೆಬಡಿದು
ಪರಿಹರಿಸು ಭೀತಿಯನು
ನರಹರಿಯೆ ನಿನ್ನಲ್ಲಿ ಬೇಡುತಿಹೆನು
ಪಂಕಜಾ.ಕೆ
Comments
Post a Comment